ಶಿಗ್ಗಾಂವಿ: ಬಿಜೆಪಿಯಿಂದ ಭರತ್‌ ಬೊಮ್ಮಾಯಿ ಅಥವಾ ನಿರಾಣಿ; ಅಂತಿಮಗೊಳ್ಳದ ಕೈ ಅಭ್ಯರ್ಥಿ

ಶಿಗ್ಗಾಂವಿ ಕ್ಷೇತ್ರದಿಂದ ತಮ್ಮ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ಬಸವರಾಜ ಬೊಮ್ಮಾಯಿ ಚಿಂತನೆ ನಡೆಸುತ್ತಿದ್ದಾರೆ. ಮೂಲತಃ ಈ ಕ್ಷೇತ್ರವನ್ನು ತಾವು ಪ್ರತಿನಿಧಿಸುತ್ತಾ ಬಂದಿದ್ದು, ತಮ್ಮ ಕುಟುಂಬಕ್ಕೆ ಈ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಹೈಕಮಾಂಡ್‌ ಮುಂದೆ ಬೇಡಿಕೆ ಇರಿಸಿದ್ದಾರೆ.

ಆದರೆ ಬಹಿರಂಗವಾಗಿ ತಮ್ಮ ಪುತ್ರ ಉದ್ಯಮದತ್ತ ಗಮನ ಹರಿಸಿದ್ದು, ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಬೀಳಗಿ ಕ್ಷೇತ್ರದಿಂದ ಪರಾಭವಗೊಂಡಿರುವ ಬಿಜೆಪಿ ನಾಯಕ ಮುರುಗೇಶ್‌
ನಿರಾಣಿ ಅವರೂ ಸಹ ಆಕಾಂಕ್ಷಿಯಾಗಿದ್ದಾರೆ.

ಈ ಕ್ಷೇತ್ರದಲ್ಲಿ ಪಂಚಮಶಾಲಿ ಮತದಾರರ ಸಂಖ್ಯೆ ಗಣನೀಯವಾಗಿದ್ದು ಗೆಲುವು ಸುಲಭ ಎನ್ನುವುದು ಇವರ ವಾದವಾಗಿದೆ. ಈಗಾಗಲೇ ಅವರು ಹಲವು ಮಠಾಧೀಶರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ
ಕ್ಷೇತ್ರಕ್ಕೆ ನಿರಾಣಿ ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಿದ್ದಾರೆ. ವರಿಷ್ಠರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೆ
ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸದ್ದಿಲ್ಲದೆ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ. ಅವರು ಈಗಾಗಲೇ ಸ್ಥಳೀಯ ಮುಖಂಡರು ಮತ್ತು
ಬೂತ್‌ ಮಟ್ಟದ ಪದಾಧಿಕಾರಿಗಳೊಂದಿಗೆ ಚರ್ಚೆ ಆರಂಭಿಸಿದ್ದಾರೆ.

More articles

Latest article

Most read