ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯಗೊಳಿಸಿದ ಶಿರಸಿ ಮಾರಿಕಾಂಬಾ ದೇವಸ್ಥಾನ

Most read

ರಾಜ್ಯ ಪ್ರಸಿದ್ಧ ಶಿರಸಿ ಶ್ರೀಮಾರಿಕಾಂಬೆ ದೇವಾಲಯದ ವಸ್ತ್ರಸಂಹಿತೆ ಜಾರಿಗೆ ಬಂದಿದೆ.

ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯವಾಗಿ ಧರಿಸತಕ್ಕದ್ದು ಎಂಬ ಸೂಚನೆಯ ಬೋರ್ಡ್‌ ಅನ್ನು ದೇಗುಲ ದ್ವಾರದಲ್ಲಿಯೇ ಹಾಕಲಾಗಿದೆ.

ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕು ಎಂಬ ಮುಜರಾಯಿ ಇಲಾಖೆಯ ಆದೇಶದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.

ದೇಗುಲಗಳಲ್ಲಿ ಪಾವಿತ್ರತ್ರ್ಯತೆ ಕಾಪಾಡಲು ಮುಜರಾಯಿ ಇಲಾಖೆ ಈ ಆದೇಶ ಮಾಡಿದೆ. ನವರಾತ್ರಿ ಆರಂಭದಿಂದ ಈ ಬೋರ್ಡ್‌ ಅಳವಡಿಸಲಾಗಿದೆ.

More articles

Latest article