ದರ್ಶನ್ ಮೇಲೆ ಬೀಳಬೇಕಿದ್ದ ಕೇಸನ್ನು ಮತ್ತೊಬ್ಬ ಆರೋಪಿ ಮೇಲೆ ಹೊರಿಸಿದ್ದು ತಪ್ಪು: ಹೈಕೋರ್ಟ್

Most read

ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ರೌಡಿ, ವಿಲ್ಸನ್ ಗಾರ್ಡನ್ ನಾಗ ಮತ್ತು ಇತರರೊಂದಿಗೆ ಕುಳಿತು ಕಾಫಿ, ಸಿಗರೇಟ್ ಸೇದಿದ ಆರೋಪದ ಮೇಲೆ ನಟ ದರ್ಶನ್ ಮೇಲೆ ಬೀಳಬೇಕಿದ್ದ ಕೇಸನ್ನು ಮತ್ತೊಬ್ಬ ಆರೋಪಿ ಪ್ರದೋಷ್ ಎಸ್ ರಾವ್ ಮೇಲೆ ಹೊರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಳಗಾವಿ ಕೇಂದ್ರ ಕಾರಾಗೃಹದ ಅಂಧೇರಿ ಜೈಲಿಗೆ ವರ್ಗಾಯಿಸಿದ್ದ ಪ್ರದೋಷ್ ನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ವಿಚಾರಣಾಧೀನ ಕೈದಿಯನ್ನು ಅಂತಹ ಸೆಲ್‌ನಲ್ಲಿ ಇರಿಸುವುದು ಕಾನೂನಿಗೆ ತಿಳಿದಿಲ್ಲ, ಆದರೆ ಗಂಭೀರವಾದ ಸಂದರ್ಭಗಳನ್ನು ಖಚಿತಪಡಿಸಿಕೊಳ್ಳದ ಹೊರತು ವಿಚಾರಣಾಧೀನ ಕೈದಿಗಳ ಸ್ಥಳಾಂತರವು ಪ್ರಾಸಿಕ್ಯೂಷನ್‌ನ ಹುಚ್ಚಾಟಿಕೆ ಮತ್ತು ಆಟವಾಗಬಾರದು. ಇಂತಹ ಆದೇಶಗಳನ್ನು ಹೊರಡಿಸುವಾಗ ಮ್ಯಾಜಿಸ್ಟ್ರೇಟ್‌ಗಳು ಯೋಚನೆ ಮಾಡಬೇಕು ಎಂದು ಕಿಡಿಕಾರಿದೆ.

ದರ್ಶನ್ ಕಾಫಿ ಮಗ್ ಹಿಡಿದುಕೊಂಡು ಕುಳಿತಿದ್ದ ಸ್ಥಳದಲ್ಲಿ ಪ್ರದೋಷ್ ಇದ್ದನೇ ಎಂದು ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ತನ್ನ ಕೊಠಡಿಯಲ್ಲಿ ಕುಳಿತಿದ್ದ ಪ್ರದೋಷ್ ಅನ್ಯಾಯವಾಗಿ ದರ್ಶನ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

ಪ್ರದೋಶ್ ನನ್ನು ‘ಅಂಧೇರಿ ಜೈಲ್’ನಲ್ಲಿ 15 ಗಂಟೆಗಳ ಕಾಲ ಕತ್ತಲೆಯಲ್ಲಿದ್ದ ಸೆಲ್ ನಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿತ್ತು. ಎಂಟು ಗಂಟೆಗಳ ಕಾಲ ಕ್ಯಾಮೆರಾದ ಮುಂದೆ ಕುಳಿತುಕೊಳ್ಳುವಂತೆ ಮಾಡಲಾಯಿತು. ಯಾವ ತಪ್ಪು ಮಾಡದೆಯೂ ಬೆಳಗಾವಿ ಜೈಲಿಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು 2024ರ ಆಗಸ್ಟ್ 27ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರದೋಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದೇಶವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಅರ್ಜಿದಾರರನ್ನು ವಿಶೇಷವಾಗಿ ಅಂಧೇರಿ ಸೆಲ್‌ಗೆ ವರ್ಗಾಯಿಸಲು ಯಾವುದೇ ಸ್ವತಂತ್ರ ಕಾರಣವಿಲ್ಲ, ಇದು ನಿಸ್ಸಂದೇಹವಾಗಿ ವರ್ಗಾವಣೆಗೊಂಡ ವಿಚಾರಣಾಧೀನ ಕೈದಿಗಳ ಹಕ್ಕಿನ ಮೇಲೆ ಪರಿಣಾಮ ಬೀರಿದೆ ಅವರನ್ನು ಬೆಂಗಳೂರಿಗೆ ಮರು ವರ್ಗಾಯಿಸಬೇಕು ಎಂದು ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ ಹೇಳಿದರು.

More articles

Latest article