ನವೆಂಬರ್‌ 1ಕ್ಕೆ ಕರಾಳ ದಿನಾಚರಣೆಗೆ ಅನುಮತಿ ಇಲ್ಲ: MESಗೆ ಡಿಸಿ ಎಚ್ಚರಿಕೆ

Most read

ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸಲು ಅನುಮತಿ ಕೋರಿ ಮಹರಾಷ್ಟ್ರ ಏಕೀಕರಣ ಸಮಿತಿ (MES​) ಮುಖಂಡರಿಗೆ ಅನುಮತಿ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯೋತ್ಸವ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಜತೆ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಬೆಳಗಾವಿಯಲ್ಲಿ ಕರಾಳ‌ ದಿನ ಆಚರಣೆಗೆ ಅವಕಾಶ ಕೊಡುವುದಿಲ್ಲ. ಕರಾಳ‌ ದಿನ ಆಚರಣೆಗೆ ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂದು ಕನ್ನಡ ಪರ ಸಂಘಟನೆಗಳಿಗೆ ಭರವಸೆ ನೀಡಿದ್ದಾರೆ.

1956ರಲ್ಲಿ ರಾಜ್ಯಗಳ ಪುನರ್​ ವಿಂಗಡಣೆ ಆದ ಬಳಿಕ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಲು ಎಂಇಎಸ್​ ಹುಟ್ಟಿಕೊಂಡಿತು. ಕರ್ನಾಟಕ ರಾಜ್ಯ ಉದಯವಾದ ದಿನದಂದೇ ಕರಾಳ ದಿನ ಆಚರಿಸುತ್ತ ಬರಲಾಗಿದೆ.

More articles

Latest article