ಮುಡಾ ಪ್ರಕರಣಕ್ಕೆ ಇಡಿ ಪ್ರವೇಶ: ಸಿಎಂ ಮನೆ ಮೇಲೆ ದಾಳಿ ಸಾಧ್ಯತೆ, ಸಿದ್ದರಾಮಯ್ಯ ಹಣಿದರೆ ರಾಜ್ಯ ಸರ್ಕಾರ ಅಸ್ಥಿರ!

Most read

ಮುಡಾ ಬದಲಿ ನಿವೇಶನ ಪ್ರಕರಣಕ್ಕೆ ಲೋಕಾಯುಕ್ತ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯ ಪ್ರವೇಶ ಮಾಡಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಇಡಿ ದಾಳಿ ಮಾಡುವ ಸಾಧ್ಯತೆ ಕಾಣುತ್ತಿದೆ.

ಸಿಎಂ ನಿವಾಸದ ಮೇಲಿನ ದಾಳಿಯ ಕುರಿತು ಕಳೆದ ರಾತ್ರಿ ಗಂಭೀರ ಚರ್ಚೆಯಾಗಿದೆ. ದಾಳಿಯ ವೇಳೆ ಪ್ರಕರಣ ಸಂಬಂಧ ದಾಖಲೆ ಶೋಧ ನಡೆಸುವ ಪ್ರಕ್ರಿಯೆಗೆ ಕೈ ಹಾಕುವುದು ಖಚಿತವಾಗಿದೆ. ಅಗತ್ಯವಾದ ಮಾಹಿತಿ ಸಿಗದೇ ಇದ್ದಾಗ ಸಿಎಂಗೆ ನೊಟೀಸ್ ಕೂಡ ಕೊಡುವ ಸಾಧ್ಯತೆ ಇದೆ.

ಇಡಿ ಏನಾದರು ನೊಟೀಸ್ ನೀಡಿದರೆ ಅದಕ್ಕೆ ಉತ್ತರ ನೀಡುವುದು ಇಲ್ಲವೇ ಕಾನೂನು ಹೋರಾಟ ರೂಪಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಚರ್ಚೆಯಾಗಿದೆ. ಕಾನೂನು ಹೋರಾಟ ರೂಪಿಸುವ ಕುರಿತು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಇ.ಡಿ. ಮುಂದಿನ‌ ತೀರ್ಮಾನ ಗಮನಿಸಿ ಹೋರಾಟ ಮಾಡುವ ನಿಲುವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯರನ್ನು ಹಣಿಯಲು ಮುಂದಾದ ಇಡಿ: ಕಾರಣವೇನು?

ಅತ್ಯಂತ ಜನಪ್ರಿಯ ಸಿಎಂ ಆಗಿರುವ ಸಿದ್ದರಾಮಯ್ಯ ಅವರನ್ನು ಹೇಗಾದರು ಮಾಡಿ ಹಣಿದರೆ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಿ ತಮ್ಮ ಸರ್ಕಾರವನ್ನು ರಚಿಸಲು ಸುಲಭವಾಗುತ್ತದೆ ಎಂಬುದು ಕೇಂದ್ರ ಬಿಜೆಪಿ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ. ಇದರ ಭಾಗವಾಗಿಯೇ ಮುಡಾ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿದೆ ಎಂಬುದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ದೆಹಲಿ ಸರ್ಕಾರದ ಅಕ್ರಮ ಮಧ್ಯ ಕಾಯ್ದೆ ವಿಷಯವಾಗಿ ಕೇಂದ್ರ ತನಿಖಾ ಸಂಸ್ಥೆ ತನಿಖೆ ಮಾಡುತ್ತಿರುವಾಗಲೇ ಇಡಿ ಮನಿ ಲಾಂಡ್ರಿಂಗ್ ಕೇಸ್ ದಾಖಲಿಸಿಕೊಂಡು ದೆಹಲಿ ಮುಖ್ಯಮಂತ್ರಿಗಳನ್ನು ಹೇಗೆ ಹಣಿದರೋ ಅದೇ ಮಾದರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹಣಿಯಲು ವ್ಯವಸ್ಥಿತ ಬ್ಲೂ ಪ್ರಿಂಟ್ ರೆಡಿಯಾದಂತಿದೆಯಂತೆ.

ಸದ್ಯ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತ ಮೂಲಕ ಮುಡಾ ಪ್ರಕರಣವನ್ನು ತನಿಖೆ ಮಾಡಲು ಆದೇಶ ನೀಡಿದ್ದರು. ಇದಕ್ಕೆ ಸಂಬಂಧವೇ ಇಲ್ಲದ ಕೇಂದ್ರ ಸರ್ಕಾರದ ಇಡಿ ಸಂಸ್ಥೆ ಮನಿ ಲಾಂಡ್ರಿಂಗ್ ಕೇಸ್ ಬುಕ್ ಮಾಡಿಕೊಂಡು ಸಿಎಂ ಸಿದ್ದರಾಮಯ್ಯರನ್ನು ಹಣಿಯಲು ತಂತ್ರಗಾರಿಕೆಯನ್ನು ರೂಪಿಸುತ್ತಿದೆ.

ಸದ್ಯ ಮುಡಾ ಪ್ರಕರಣದಲ್ಲಿ ಇಡಿ ಪ್ರವೇಶಿಸಿದ್ದು, ಮೊದಲಿಗೆ ಸಿದ್ದರಾಮಯ್ಯ ಅವರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಕಲೆ ಹಾಕುವ ಸಾಧ್ಯತೆ ಹೆಚ್ಚಿದೆ. ಅಲ್ಲಿ ಅವರಿಗೆ ಏನು ಸಿಗದೇ ಇದ್ದಾಗ ಮುಡಾ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ, ಹೇಗಾದರು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಅವರಲ್ಲಿ ಹೇಳಿಸಿ ಹಣಿಯಲು ಮುಂದಾಗಬಹುದು ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸದ್ಯ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಕೈವಾಡ, ಹಸ್ತಕ್ಷೇಪ ಇಲ್ಲ ಎಂಬುದು ಬಿಜೆಪಿ ನಾಯಕರಿಗೂ ಗೊತ್ತಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಹಣಿದರೆ ಮಾತ್ರ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯ ಎಂಬುದು ಬಿಜೆಪಿಗೆ ಅರ್ಥವಾಗಿದ್ದು, ಕೇಂದ್ರ ಸರ್ಕಾರದ ಸಂಸ್ಥೆ ಮೂಲಕ ಈ ಆಪರೇಷನ್ ಮಾಡಲು ಮುಂದಾಗಿದೆ ಎಂಬುದು ಚರ್ಚೆಯಾಗುತ್ತಿದೆ.

ಸಿಎಂ ಪುತ್ರ ಯತೀಂದ್ರಗೂ ಮುಡಾ ಸಂಕಷ್ಟ!

ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಕೊರಳಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದೆ‌. ಸದ್ಯ ಈವರೆಗೂ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರ ಹೆಸರು ಮಾತ್ರ ಈ ಕೇಸಿನಲ್ಲಿ ಇದ್ದು, ಈಗ ಸಿಎಂ ಪುತ್ರ ಯತೀಂದ್ರ ಅವರ ಹೆಸರನ್ನು ಸೇರ್ಪಡೆ ಮಾಡಿಸಲು ಬಿಜೆಪಿ ರಣತಂತ್ರ ರೂಪಿಸಿದೆ.

ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಶಾಸಕರಾಗಿದ್ದರು ಅವರು ಕೂಡ ನಿವೇಶನ ಹಂಚಿಕೆ ವಿಚಾರವಾಗಿ ಪ್ರಭಾವ ಬೀರಿರುವ ಸಾಧ್ಯತೆ ಹೆಚ್ಚಿದ್ದು ಅವರ ಹೆಸರನ್ನು ಈ ಪ್ರಕರಣದಲ್ಲಿ ದಾಖಲಿಸಬೇಕು ಎಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಲು ಸಿದ್ದತೆ ನಡೆದಿದೆ ಎನ್ನಲಾಗಿದೆ. ಈ ಕುರಿತು ವಕೀಲ ಪ್ರದೀಪ್ ಅವರು ಮಂಗಳವಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

More articles

Latest article