ಕೋಲಾರ ಜಿಲ್ಲೆಯಾದ್ಯಂತ ಆತಂಕ ಹಾಗೂ ಜಿಲ್ಲಾ ಪೊಲೀಸರಿಗೆ ತಲೆ ನೋವನ್ನು ತಂದಿಟ್ಟಿದ್ದ ಅನುಮಾನಾಸ್ಪದ ಸೂಟ್ ಕೇಸ್ ಖಾಲಿ ಖಾಲಿ ಸೂಟ್ ಕೇಸ್ ಎಂದು ತಿಳಿದು ಬಂದಿದೆ.
ಹೊರ ವಲಯದ ಜಿಲ್ಲಾ ರಕ್ಷಣಾಧಿಕಾರಿಗಳವರ ಕಛೇರಿಯ ವ್ಯಾಪ್ತಿಯ ರಾಷ್ರ್ಟೀಯ ಹೆದ್ಧಾರಿ ಸರ್ವೀಸ್ ರಸ್ತೆಯಲ್ಲಿ ಬೆಳಗ್ಗೆ ಸುಮಾರು ಏಳರ ಸಮಯದಲ್ಲಿ ಅಲಾರಂ ಶಬ್ಧವನ್ನುಂಟು ಮಾಡುತ್ತಿದ್ದ ಸೂಟ್ ಕೇಸ್ ಬಿದ್ದಿದ್ದು ಅದನ್ನ ಕಂಡ ದಾರಿ ಹೋಕರು ಕಂಟ್ರೋಲ್ ರೂಂ ಗೆ ಮಾಹಿತಿ ತಲುಪಿಸಿದ್ದಷ್ಟೇ. ತಕ್ಷಣ ಕಾರ್ಯ ಪ್ರವೃತ್ತರಾದ ಜಿಲ್ಲಾ ಪೊಲೀಸರು ಅದನ್ನ ನಿಷ್ಕ್ರಿಯಗೊಳಿಸಲು ಪೊಲೀಸರೂ ಸೇರಿದಂತೆ ಬಾಂಬ್ ನಿಷ್ಕ್ರಿಯ ದಳˌ ಶ್ವಾನ ದಳ ಎಲ್ಲರೂ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ನಂತರ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ಪರಿಣಿತರ ತಂಡಗಳನ್ನು ಕರೆಸಿ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸುವ ಮೂಲಕ ಸೂಟ್ ಕೇಸ್ ನ್ನು ನಿಷ್ಕ್ರಿಯಗೊಳಿಸಿದ್ದು ಸೂಟ್ ಕೆಸ್ ನಲ್ಲಿ ಏನೂ ಇಲ್ಲವೆಂದು ಹಾಗೂ ಆ ಸೂಟ್ ಕೇಸ್ ಸೆನ್ಸಾರ್ ಸೂಟ್ ಕೇಸ್ ಆಗಿದ್ದರಿಂದ ಅಲಾರಂ ಶಬ್ಧ ಉಂಟು ಮಾಡಿತ್ತಿತ್ತೆಂದು ತಿಳಿದು ಬಂದಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಕ್ಷಣಾಧಿಕಾರಿ ನಿಖಿಲ್ ಇದೊಂದು ಸೆನ್ಸಾರ್ ಸೂಟ್ಕೇಸ್ ಎಂದೂ ಇದರಲ್ಲಿ ಅಂತಹ ಆತಂಕ ಪಡುವಂತದ್ದೇನೂ ಇಲ್ಲವೆಂದು ತಿಳಿಸಿದ್ದು ನಮ್ಮಲ್ಲಿ ಬಾಂಬ್ ನಿಷ್ಕ್ರಿಯ ತಂಡಗಳಿದ್ದರೂ ಅದನ್ನ ಪರಿಶೀಲಿಸುವುದಕ್ಕಾಗಿಯೇ ಬೆಂಗಳೂರಿನಿಂದ ವಿಶೇಷ ಪರಿಣಿತರನ್ನ ಕರೆಸಲಾಗಿತ್ತೆಂದು ಸ್ಪಷ್ಟಪಡಿಸಿ ಈ ರೀತಿಯ ಸೂಟ್ ಕೇಸು ಇಲ್ಲಿಗೆ ಬಂದದ್ದು ಹೇಗೆ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆಯೆಂದಿದ್ದಾರೆ.