ಬೆಂಗಳೂರು: ನಾಡಿನಾದ್ಯಂತ ಮೇಷ್ಟ್ರು ಎಂದೆ ಕರೆಯಿಸಿಕೊಳ್ಳುವ, ಸಾಂಸ್ಕೃತಿಕ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ಸಹಾಯಕ ಪ್ರಾಧ್ಯಾಪಕರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಇಂದು ನಗರದ ಬರಗೂರು ಅವರ ನಿವಾಸದಲ್ಲಿ ಹೊಸದಾಗಿ ಆಯ್ಕೆಯಾದ ಬಳಗದ ಪ್ರಾಧ್ಯಾಪಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ 2021ರಲ್ಲಿ ಆರಂಭವಾದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಮೇಷ್ಟ್ರು ಅವರ ಪ್ರವೇಶದಿಂದಾಗಿಯೇ ಪೂರ್ಣವಾಯಿತು ಎಂದು ಬಳಗದ ರಮೇಶ್ ಎಸ್ ಮಾತನಾಡಿದರು.
ಮೇಷ್ಟ್ರು ನೇಮಕಾತಿ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸುವವರೆಗೂ ಸಂಬಂಧಿಸಿದವರಿಂದ ಸಮಸ್ಯೆಗಳೇ ಕೇಳಿಬರುತ್ತಿದ್ದವು. ನಂತರದಲ್ಲಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡೆವು ಎಂದರು.
ನೇಮಕಾತಿ ಪೂರ್ಣಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು, ನಿರುದ್ಯೋಗಿಗಳನ್ನು ಅಂತಿಮ ಗುರಿ ಮುಟ್ಟಿಸಲು ಶ್ರಮಿಸಿದ ಮೇಷ್ಟ್ರಿಗೆ 1208 ಸಹಾಯಕ ಪ್ರಾಧ್ಯಾಪಕರ ಪರವಾಗಿ ಜಯಶಂಕರ್ ಎನ್ ಅವರು ಧನ್ಯವಾದಗಳನ್ನು ಸಲ್ಲಿಸಿದರು. ಬಳಗದ ಕೆಲವು ಸಹಾಯಕ ಪ್ರಾಧ್ಯಾಪಕರಿದ್ದರು.