ಅಮಲು ಮುಕ್ತ ಸಕಲೇಶಪುರಕ್ಕೆ, ಪೊಲೀಸರೊಂದಿಗೆ ಸರ್ವರ ಸಹಕಾರ ಅಗತ್ಯ: ಡಿ ವೈ ಎಸ್ ಪಿ ಪ್ರಮೋದ್ ಕುಮಾರ್

Most read

ಸಕಲೇಶಪುರ:ಸೆ, 14: ಸ್ವಯಂ ಜಾಗೃತಾ ಆಗದಿದ್ದರೆ ಅಮಲು ಮುಕ್ತ ಸಮಾಜವನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ಮೂಲನೆ ಮಾಡಲು ಸಾದ್ಯವಾಗುವುದಿಲ್ಲ ಎಂದು ಪೊಲೀಸ್ ಸಹಾಯಕ ಉಪಅಧೀಕ್ಷಕರಾದ ಪ್ರಮೋದ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮಲು ಮುಕ್ತ ಭಾರತ ಎಂಬ ವಿಷಯದ ಬಗ್ಗೆ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಡ್ರಗ್ಸ್ ಎಂಬ ಮಹಾಮಾರಿಯನ್ನು ನಿಯಂತ್ರಣ ಮಾಡಲು ಕೇವಲ ಪೊಲೀಸ್ ಇಲಾಖೆ ಒಂದೇ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಬಕಾರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ,ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ತಾಲೂಕು ಪಂಚಾಯಿತಿ ಸಂಘ ಸಂಸ್ಥೆಗಳು ಜೊತೆಗೆ ನಮ್ಮೊಂದಿಗೆ ಪತ್ರಕರ್ತರೂ ಸೇರಿದಂತೆ ಇನ್ನೂ ಹಲವು ಇಲಾಖೆಗಳು ಕೈಜೋಡಿಸಬೇಕಾಗುತ್ತದೆ ಎಂದರು.

ಮನೆಯಲ್ಲಿ ಮಾತ್ರ ಡ್ರಗ್ಸ್‌ನಂತಹ ಮಾರಕ ಚಟುವಟಿಕೆಗಳಿಂದ ಒಬ್ಬ ವ್ಯಕ್ತಿ ಹಾಳಾಗುವುದಿಲ್ಲ ಆತನ ಕುಟುಂಬ ಮತ್ತು ಇಡೀ ಸಮಾಜವೇ ಹಾಳಾಗುತ್ತದೆ ಹಾಗಾಗಿ ಇದನ್ನು ನಿಯಂತ್ರಣ ಮಾಡಲು ಜಾಗೃತಿ ಮೂಡಬೇಕಾದರೆ ಪ್ರತಿಯೊಬ್ಬರ ಜವಾಬ್ದಾರಿಯೂ ಕೂಡ ಬಹಳ ಮುಖ್ಯ ಎಂದರು.

ಡ್ರಗ್ಸ್ ಮಾರಾಟ ಮಾಡುವವರ ಮತ್ತು ಅದನ್ನು ಉಪಯೋಗಿಸುವವರ ಮಾಹಿತಿ ಗೊತ್ತಿದ್ದೂ ಕೂಡ ನಾನೇಕೆ ಮಾಹಿತಿ ನೀಡಬೇಕು ಮಾಹಿತಿ ನೀಡಿದರೆ ನಾನೂ ಕೂಡ ಸಾಕ್ಷಿ ಹೇಳಲು ನ್ಯಾಯಲಯಕ್ಕೆ ಹೋಗಬೇಕಾಗುತ್ತದೆ ಎಂದು ಮೌನ ವಹಿಸುವುದೂ ಕೂಡ ಸಾಮಾಜಿಕ ಅಪರಾಧವಾಗುತ್ತದೆ ಮಾಹಿತಿ ಗೊತ್ತಿರುವವರು ಯಾವುದೇ ಭಯವಿಲ್ಲದೆ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದರು.

ತಾಲೂಕಿನಲ್ಲಿ ಅನೇಕ ಭಾಗಗಳಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಇದ್ದು ಇಲ್ಲಿಗೆ ಬರುವ ಹೊರಜಿಲ್ಲೆಯ ಪ್ರವಾಸಿಗರು ಅಮಲು ಬರುವ ವಸ್ತುಗಳನ್ನು ಸೇವನೆ ಮಾಡುವ ಮೂಲಕ ಇಲ್ಲಿನ ವಾತಾವರಣ ಹಾಳು ಮಾಡುತ್ತಿದ್ದಾರೆ ಇದರ ಬಗ್ಗೆ ಏನು ಕ್ರಮ ವಹಿಸಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹಾಸನ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಹಾಗೂ ನಮ್ಮ ಇಲಾಖೆ ಜಂಟಿಯಾಗಿ ಈ ಹಿಂದೆಯೇ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಹೋಗಿ ಪರಿಶೀಲನೆ ನಡೆಸಲಾಗಿದೆ ಎನ್.ಡಿ.ಪಿ.ಎಸ್ ಕಾಯಿದೆ ಪ್ರಕಾರ ಡ್ರಗ್ಸ್ ಉಪಯೋಗಿಸುವುದು ಮತ್ತು ಅದನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಕಾನೂನು ರೀತಿಯಲ್ಲಿ ಅನುಮತಿ ಪಡೆದು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ನಡೆಸುತ್ತಿರುವವರಿಗೆ ಸಂಪೂರ್ಣ ವಿವರಗಳನ್ನು ಪಡೆಯುವಂತೆ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರಿಗೆ ಈ ಹಿಂದೆಯೇ ಸಭೆ ನಡೆಸಿ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಿಗೆ ಬರುವವರ ಚಲನ ವಲನಗಳ ಬಗ್ಗೆ ಗಮನ ಇಡಬೇಕು ಒಂದು ವೇಳೆ ಅಂತಹ ವ್ಯಕ್ತಿಗಳು ಇದ್ದರೂ ಕೂಡ ನಮ್ಮ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಎಲ್ಲಿ ಕೆಟ್ಟ ಹೆಸರು ಬರುತ್ತದೆಯೋ ಅಥವಾ ನ್ಯಾಯಾಲಯದಲ್ಲಿ ನಾವು ಸಾಕ್ಷಿ ಹೇಳಬೇಕಾಗುತ್ತದೆ ಎಂದು ಭಾವಿಸಿ ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಾರೆ ಇದು ಸರಿಯಾದ ಕ್ರಮವಲ್ಲ ಪ್ರತಿಯೊಂದು ಮಾಹಿತಿಯನ್ನು ಸಂಬಂಧಿಸಿದ ಅದಿಕಾರಿಗಳಿಗೆ ತಿಳಿಸಬೇಕು ಎಂದರು.

ಡ್ರಗ್ಸ್ ಎಂಬುದು ದೇಶಾದ್ಯಾಂತ ಇಂದು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ಕೇವಲ ನಮ್ಮ ಇಲಾಖೆಯೊಂದರಿಂದ ತಡೆಗಟ್ಟಲು ಸಾಧ್ಯವಿಲ್ಲ ಸಕಲೇಶಪುರ ತಾಲೂಕು ಭೌಗೋಳಿಕವಾಗಿ ತುಂಬ ವ್ಯಾಪ್ತಿಯನ್ನು ಹೊಂದಿದ್ದು ನಮ್ಮಲ್ಲಿರುವ 30 ಸಿಬ್ಬಂದಿಗಳಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾದ್ಯವಿಲ್ಲ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣ ಮಾಡಲು ಸಾಮೂಹಿಕ ಪ್ರಯತ್ನಗಳು ಆಗಬೇಕಾಗಿದ್ದು ಮೊಟ್ಟಮೊದಲು ಇದು ಪ್ರತಿಯೊಬ್ಬರಲ್ಲೂ ಸ್ವಯಂ ಪ್ರೇರಿತವಾಗಿ ಜಾಗೃತಿ ಮೂಡಿದಾಗ ಮಾತ್ರ ಇಂತಹ ಪಿಡುಗನ್ನು ತಡೆಯಬಹುದಾಗಿದ್ದು ಈ ಸಂವಾದ ಗೋಷ್ಟಿಯಲ್ಲಿ ನನ್ನನ್ನು ಕರೆಸಿ ಸಂವಾದ ನಡೆಸಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟ ತಾಲೂಕು ಪತ್ರಕರ್ತರ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.

ಸಂವಾದ ಕಾರ್ಯಕ್ರಮ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

More articles

Latest article