ಸಿದ್ದರಾಮಯ್ಯ ರಾಜೀನಾಮೆ ಕೇಳಲು ಎಚ್. ಡಿ. ಕುಮಾರಸ್ವಾಮಿ ಗೆ ನೈತಿಕತೆ ಇಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಸುದ್ಧಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆ ಆಧಾರದ ಮೇಲೆ ಅಕ್ರಮ ನಡೆದಿರುವುದು ಸಾಬೀತು ನಂತರ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂ ಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಎಸ್ಐಟಿ ಮನವಿ ಮಾಡಿ ಹತ್ತು ತಿಂಗಳು ಕಳೆದಿದೆ. ನಿಜವಾಗಿಯೂ ರಾಜೀನಾಮೆ ನೀಡಬೇಕಿರುವುದು ಕುಮಾರಸ್ವಾಮಿ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ನೀಡಿರುವುದು ಖಾಸಗಿ ದೂರು. ಎಫ್ ಐ ಆರ್ ಆಗಿಲ್ಲ, ತನಿಖೆ ನಡೆದಿಲ್ಲ. ಆದರೆ ದೂರು ನೀಡಿದ ದಿನವೇ ನೋಟಿಸ್ ನೀಡಿರುವುದು ಎಷ್ಟು ಸರಿ. ತನಿಖೆಯಲ್ಲಿ ಅಕ್ರಮ ಸಾಬೀತು ಪ್ರಕರಣ ದಲ್ಲಿ ಕುಮಾರಸ್ವಾಮಿ ವಿರುದ್ಧ ಮೊದಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕಿತ್ತು. ನೈತಿಕತೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ನೂರು ಸಿದ್ದರಾಮಯ್ಯ ಬಂದರೂ ಏನೂ ಮಾಡಲಾಗದು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅವರು ಒಬ್ಬ ಜಮೀರ್ ನನ್ನು ಫೇಸ್ ಮಾಡಲಿ ಸಾಕು ಎಂದು ಸವಾಲು ಹಾಕಿದರು.
ರಾಮನಗರದಲ್ಲಿ ಕುಮಾರಸ್ವಾಮಿ ನಾನು ಒಂದೇ ನಂಬರ್ ಪ್ಲೀಸ್ ಎರಡು ಬಸ್ ಗೆ ಹಾಕಿ ಓಡಿಸುತ್ತಿದ್ದೆ ಎಂದಿದ್ದಾರೆ. ಹಾಗಿದ್ದರೆ ನನ್ನ ನಿಮ್ಮ ಜತೆ ಹೇಗೆ ಇಟ್ಟುಕೊಡಿದ್ದಿರಿ ಎಂದು ಪ್ರೆಶ್ನೆ ಮಾಡಿದರು.
ಆ ಪ್ರಕರಣ ದಲ್ಲಿ ನ್ಯಾಯಾಲಯ ನನಗೆ ಕ್ಲೀನ್ ಚಿಟ್ ನೀಡಿದೆ. ನಮ್ಮ ಚಿಕ್ಕಪ್ಪ ನಿಗೆ ಸಂಬಂಧಿ ಸಿದ ಪ್ರಕರಣ ಅದು. ನನಗೆ ಸಂಬಂಧ ಇಲ್ಲ. ಆದರೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂಬುದು ನಾನು ಹೇಳಲಾ. ಲೀಗಲ್, ಇಲ್ಲೀ ಗಲ್ ಬಗ್ಗೆ ನನ್ನ ಜತೆ ಬಹಿರಂಗ ಚರ್ಚೆ ಗೆ ಬರಲಿ. ನಾನು ಬಾಯಿ ಬಿಟ್ಟರೆ ಸಾಕಷ್ಟು ಸತ್ಯ ಹೊರಗೆ ಬರುತ್ತೆ ಎಂದು ಹೇಳಿದರು.