ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಕೆ.ಎಚ್ ಮುನಿಯಪ್ಪ, ಗ್ಯಾರಂಟಿ ಯೋಜನೆಯನ್ನ ಬಡವರಿಗೆ ಜಾರಿ ಮಾಡಲಾಗಿದೆ ಬಡತನದಲ್ಲಿ ಇರುವವರಿಗೆ ಗ್ಯಾರಂಟಿಗಳು ಅವಶ್ಯಕ. ಶಕ್ತಿಯೋಜನೆ ಬಿಟ್ಟು ಉಳಿದ ಯೋಜನೆ ಪರಿಷ್ಕರಣೆ ಮಾಡಬೇಕಿದೆ. ಅರ್ಹರಿಗೆ ಮಾತ್ರ ಅನ್ನಭಾಗ್ಯ ಕೊಡಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ .
ಅನ್ಯಭಾಗ್ಯ ಯೋಜನೆಯಡಿ ಈಗ ಐದು ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುತಿದ್ದು, ಹಣದ ಬದಲಾಗಿ ಎಣ್ಣೆ, ಬೇಳೆ ಇತರೆ ಧಾನ್ಯ ನೀಡುವಂತೆ ಸಲಹೆಗಳು ಬಂದಿವೆ. ಅದಕ್ಕೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಪರಿಷ್ಕರಣೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಬೇಕು. ನಾವು ಗ್ಯಾರಂಟಿಗೆ ಕತ್ತರಿ ಹಾಕಬೇಕೆಂದು ಹೇಳಲ್ಲ ಎಂದು ತಿಳಿಸಿದರು.
ಗ್ಯಾರಂಟಿಯಿಂದ ಕ್ಷೇತ್ರ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಚಿವರು ದೂರು ನೀಡಿದ್ದು, ಗ್ಯಾರಂಟಿ ಲೋಪಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಲಾಭ ಸಿಗುವಂತೆ ಮಾನದಂಡ ರೂಪಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.