ವಕ್ಫ್ ಆಸ್ತಿ ಮೇಲೆ ಮಂಡಳಿ ಹೊಂದಿರುವ ಅಧಿಕಾರಕ್ಕೆ ಕಸಿದುಕೊಳ್ಳುವ ಮಸೂದೆಯನ್ನು ಸಂಸತ್ತಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. ವಕ್ಫ್ ಕಾಯಿದೆ 1995 ಅನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ ಎಂದು ಮರುನಾಮಕರಣ ಮಾಡಲು ಪ್ರಸ್ತಾಪಿಸಿದೆ.
ವಕ್ಫ್ ಎಂದರೇನು?
ಸರಳವಾಗಿ ಹೇಳುವುದಾದರೆ, ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಮಾತ್ರ ಮೀಸಲಾದ ಯಾವುದೇ ಆಸ್ತಿಯನ್ನು ವಕ್ಫ್ ಎಂದು ಕರೆಯುತ್ತಾರೆ. ಒಮ್ಮೆ ಆಸ್ತಿಯನ್ನು ವಕ್ಫ್ ಎಂದು ಘೋಷಿಸಿದರೆ, ಅದು ಹಿಂಪಡೆಯಲಾಗದಂತಾಗುತ್ತದೆ. ಈಗ ಮಂಡಿಸಿರುವ ಮಸೂದೆಯ ತಿದ್ದುಪಡಿಗಳು ಈ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿವೆ.
ದೇಶದಲ್ಲಿ ಸುಮಾರು 30 ವಕ್ಫ್ ಬೋರ್ಡ್‌ಗಳು 9 ಲಕ್ಷ ಎಕರೆ ಭೂಮಿ ಆಸ್ತಿಯನ್ನು ನಿಯಂತ್ರಿಸುತ್ತವೆ, ಇದರ ಅಂದಾಜು ಮೌಲ್ಯ 1.2 ಲಕ್ಷ ಕೋಟಿ ರೂ. ಇದು ರೈಲ್ವೇ ಮತ್ತು ರಕ್ಷಣಾ ಸಚಿವಾಲಯದ ನಂತರ ವಕ್ಫ್ ಬೋರ್ಡ್‌ಗಳು ಭಾರತದಲ್ಲಿ ಮೂರನೇ ಅತಿದೊಡ್ಡ ಭೂ ಮಾಲೀಕರನ್ನಾಗಿ ಮಾಡಿದೆ.
ವಕ್ಫ್ (ತಿದ್ದುಪಡಿ) ಬಿಲ್‌ನ ಪ್ರಮುಖ ಮುಖ್ಯಾಂಶಗಳು
- ಪ್ರಸ್ತಾವನೆಗಳಲ್ಲಿ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆ ಸೇರಿವೆ, ಇದು ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಹೊಂದಿರುತ್ತದೆ. ಮಸೂದೆಯ ಪ್ರಕಾರ, ಎಲ್ಲಾ ರಾಜ್ಯ ಮಂಡಳಿಗಳು ಮತ್ತು ಕೇಂದ್ರ ಮಂಡಳಿಯಲ್ಲಿ ಇಬ್ಬರು ಮಹಿಳೆಯರನ್ನು ನೇಮಿಸಲಾಗುತ್ತದೆ.
- ವಕ್ಫ್ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದರ ಕುರಿತು ಜಿಲ್ಲಾಧಿಕಾರಿಯನ್ನು ತೀರ್ಪುಗಾರರನ್ನಾಗಿ ಮಾಡುವುದು ಮಸೂದೆ ಉದ್ದೇಶವಾಗಿದೆ. 1995 ರ ಕಾಯಿದೆಯಲ್ಲಿ, ಅಂತಹ ನಿರ್ಧಾರಗಳನ್ನು ವಕ್ಫ್ ಟ್ರಿಬ್ಯೂನಲ್ ತೆಗೆದುಕೊಳ್ಳುತ್ತದೆ. ಈ ಅಧಿಕಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಆಸ್ತಿ ಕಬಳಿಕೆಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.
- ಪ್ರಸ್ತಾವನೆಯು ಬೋಹರಾ ಮತ್ತು ಅಘಖಾನಿಗಳಿಗಾಗಿ ಪ್ರತ್ಯೇಕ ಔಕಾಫ್ ಮಂಡಳಿಯನ್ನು ರಚಿಸುವುದನ್ನು ಪ್ರಸ್ತಾಪಿಸುತ್ತದೆ. ಕರಡು ಕಾನೂನಿನಲ್ಲಿ ಶಿಯಾಗಳು, ಸುನ್ನಿಗಳು, ಬೋಹ್ರಾಗಳು, ಅಗಾಖಾನಿಗಳು ವಕ್ಫ್ ಮಂಡಳಿಗಳಲ್ಲಿ ಪ್ರಾತಿನಿಧ್ಯವನ್ನು ಸಹ ಒದಗಿಸಲಾಗಿದೆ.
- ಇದಲ್ಲದೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಿಸಿದ ಲೆಕ್ಕಪರಿಶೋಧಕರಿಂದ ಯಾವುದೇ ವಕ್ಫ್‌ನ ಲೆಕ್ಕಪರಿಶೋಧನೆಯನ್ನು ನಿರ್ದೇಶಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವ ಉದ್ದೇಶವನ್ನು ಶಾಸನವು ಹೊಂದಿದೆ.
- ಮೌಖಿಕ ಒಪ್ಪಂದದ ಮೂಲಕ ವ್ಯಕ್ತಿಗೆ ಆಸ್ತಿಯನ್ನು ವಕ್ಫ್ ಆಗಿ ನೀಡಲು ಪ್ರಸ್ತುತ ಕಾನೂನು ಅನುಮತಿಸುತ್ತದೆ.