ಧೈರ್ಯವಾಗಿರು ವಿನೇಶ್, ನೀವು ಎಂದೆಂದಿಗೂ ದೇಶದ ಚಾಂಪಿಯನ್: ಸಿಎಂ ಸಿದ್ದರಾಮಯ್ಯ

Most read

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅವರನ್ನು ತೂಕ ವ್ಯತ್ಯಾಸದ ಹಿನ್ನಲೆ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಈ ಹಿನ್ನೆಲೆ ವಿನೇಶ್ ಅವರಿಗಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅನರ್ಹಗೊಂಡಿರುವುದು ನಿಜಕ್ಕೂ ದುರದೃಷ್ಟಕರ. ವಿನೇಶಾ ಅವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ವಿನೇಶಾ ಅವರ ಸ್ಟೈರ್ಯ, ಪುಟಿದೇಳಬಲ್ಲ ಗುಣ ಹಾಗೂ ಅರ್ಪಣಾ ಮನೋಭಾವ ಸದಾ ದೇಶವನ್ನು ಪ್ರೇರೆಪಿಸುತ್ತದೆ’ ಎಂದು ಹೇಳಿದ್ದಾರೆ.

‘ನೆನಪಿಡಿ, ಈ ಒಂದು ಕ್ಷಣದಿಂದಾಗಿ ನೀವು ದೇಶಕ್ಕಾಗಿ ಮಾಡಿದ ಅಪಾರ ಸಾಧನೆ ಹಾಗೂ ಹೆಮ್ಮೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಧೈರ್ಯವಾಗಿರು ವಿನೇಶಾ, ನಿಮ್ಮ ಮೇಲೆ ಹಾಗೂ ನಿಮ್ಮ ಅದ್ಭುತ ಪಯಣದಲ್ಲಿ ನಮಗೆ ನಂಬಿಕೆಯಿದೆ. ನೀವು ಎಂದೆಂದಿಗೂ ದೇಶದ ಚಾಂಪಿಯನ್’ ಎಂದು ಬರೆದುಕೊಂಡಿದ್ದಾರೆ.

ಮಹಿಳೆಯರ 50 ಕೆ.ಜಿ ಕೇಸ್ತಿ ವಿಭಾಗದಲ್ಲಿ 100 ಗ್ರಾಂ ತೂಕ ಹೆಚ್ಚಿದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಫೈನಲ್ಸ್ ನಲ್ಲಿ ಅವರನ್ನು ಅನರ್ಹ ಮಾಡಿದ್ದು, ಭಾರತಕ್ಕೆ ಪದಕದ ಕನಸು ಭಗ್ನಗೊಂಡಿದೆ.

ಈ ಮೊದಲು ಒಲಿಂಪಿಕ್ಸ್‌ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

More articles

Latest article