ಹೈ ಬೀಮ್ ಹೆಡ್ಲೈಟ್ ಬಳಕೆ: ನಾಲ್ಕು ದಿನದಲ್ಲಿ ಐದು ಸಾವಿರ ಪ್ರಕರಣ ದಾಖಲು

Most read

ಕಣ್ಣುಕುಕ್ಕುವ ಹೈ ಬೀಮ್ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸಿದ ಚಾಲಕರಿಗೆ ರಾಜ್ಯ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 5 ಸಾವಿರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣು ಕುಕ್ಕುವ ರೀತಿ ಎಲ್ ಇಡಿ ದೀಪ ಬಳಸಿ ವಾಹನ ಚಲಾಯಿಸಿದ ಲಾರಿ, ಟ್ರಕ್, ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳ ಮೇಲೆ ರಾಜ್ಯ ಪೊಲೀಸರು ಐದು ಸಾವಿರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ 2153, ಮೈಸೂರಿನಲ್ಲಿ 302, ತುಮಕೂರು 237, ಉತ್ತರ ಕನ್ನಡ 236, ರಾಯಚೂರು 260 ವಿಜಯನಗರ 182 ಸೇರಿದಂತೆ ರಾಜ್ಯದೆಲ್ಲೆಡೆ ಜುಲೈ 4ರ ಅಂತ್ಯಕ್ಕೆ ಐದು ಸಾವಿರ ಕೇಸ್ ದಾಖಲಿಸಿಕೊಂಡಿದ್ದಾರೆ.

ವಾಹನದಲ್ಲಿನ ಹೆಚ್ಚು ಬೆಳಕು ಹೊರಸೂಸುವ(ಹೈಬೀಮ್) ಎಲ್.ಇ.ಡಿ. ಹೆಡ್ಲೈಟ್ಗಳು ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಮಾರ್ಪಡಿಸಿದ ಹೆಡ್ಲೈಟ್ಗಳನ್ನು ಬಳಸುವವರ ವಿರುದ್ದ ರಾಜ್ಯದಾದ್ಯಂತ ಪ್ರಕರಣ ದಾಖಲಾಗಿಸುತ್ತಿದೆ.

More articles

Latest article