ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತ: ತವರಿಗೆ ಮರಳೋದು ತಡವಾಗತ್ತೆ ಭಾರತ ತಂಡ

Most read

ದ್ವೀಪಗಳ ರಾಷ್ಟ್ರ ವೆಸ್ಟ್​​ ಇಂಡೀಸ್​ ಗೆ ಅತ್ಯಂತ ಅಪಾಯಕಾರಿ ಬೆರಿಲ್ ಚಂಡಮಾರುತ ಅಪ್ಪಳಿಸುತ್ತಿದೆ. ಹೀಗಾಗಿ ಟಿ20 ಚಾಂಪಿಯನ್ಸ್ ಭಾರತದ ಸದಸ್ಯರು ತವರಿಗೆ ಮರಳೋದು ತಡವಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.

ಶನಿವಾರ ನಡೆದ ವಿಶ್ವ ಕಪ್​ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ರೋಹಿತ್ ಶರ್ಮಾ ಪಡೆ ಐಸಿಸಿ ಟಿ20 ವಿಶ್ವಕಪ್ 2024 ಅನ್ನು ಮುಡಿಗೇರಿಸಿಕೊಂಡಿತು. ಈ ಸಂಭ್ರಮವನ್ನು ಭಾರತಕ್ಕೆ ಮರಳಿ ಆಚರಿಸಬೇಕಾಗಿತ್ತು. ಆದರೆ, ಅಪಾಯಕಾರಿ ಚಂಡ ಮಾರುತ ಅವರು ತಡವಾಗಿ ಭಾರತ ಸೇರಬೇಕಾಗಿದೆ.

ಭಾನುವಾರ ಬೆಳಿಗ್ಗೆ ಗ್ರೇಡ್​ 3 ಚಂಡಮಾರುತವಾಗಿ ಪರಿವರ್ತನೆಗೊಂಡಿಡು ಗಂಟೆಗೆ 120 ಕಿಲೋಮೀಟರ್​ನಷ್ಟಿತ್ತು. ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದ್ದು ಈ ಹೊತ್ತಿನಲ್ಲಿ ಯಾವುದೇ ವಿದೇಶಿ ಆಟಗಾರರು, ಪ್ರಯಾಣಿಕರು ವಿಮಾನಯಾನ ಮಾಡಲು ಸಾಧ್ಯವಿಲ್ಲ. ಹಾಗಾಗು ಭಾರತದ ತಂಡದ ಎಲ್ಲರೂ ಸದ್ಯಕ್ಕೆ ಬಾರ್ಬಡೋಸ್​ನಲ್ಲಿ ಸಿಲುಕಿದ್ದಾರೆ.

ಸೋಮವಾರ ಚಂಡಮಾರುತ ಹೆಚ್ಚಾಗಿ ಭೂಕುಸಿತ ಕೂಡ ಉಂಟಾಗಬಹುದು ಎಂದು ಬಾರ್ಬಡೋಸ್​ ನ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ಎಲ್ಲಾ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ. ವಿಮಾನಯಾನ ಆರಂಭವಾದ ಬಳಿಕ ಭಾರತ ತವರಿಗೆ ವಾಪಸ್ ಮರಳಲಿದೆ.

More articles

Latest article