ಭಾರೀ ಮಳೆಗೆ ದೆಹಲಿ ಏರ್​​ಪೋರ್ಟ್​ ಮೇಲ್ಛಾವಣಿ ಕುಸಿತ : ಓರ್ವ ಸಾವು, 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

Most read

ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಅಬ್ಬರಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಕೂಡ ಕುಸಿದಿದೆ. ಇದರ ಪರಿಣಾಮ ಓರ್ವ ಮೃತಪಟ್ಟಿದ್ದಾರೆ. ಆರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಟರ್ಮಿನಲ್ ಒಂದರ ನಿರ್ಗಮನ ದ್ವಾರದ ಬಳಿಯ ಮೇಲ್ಚಾವಣಿ, ಕಂಬಗಳು ಕುಸಿದಿವೆ. ಕಾರುಗಳ ಮೇಲೆ ಮೇಲ್ಛಾವಣಿ ಬಿದ್ದಿದ್ದರಿಂದ ಏರ್‌ಪೋರ್ಟ್‌ನಲ್ಲಿದ್ದ ಅನೇಕ ಕಾರುಗಳು ಸಂಪೂರ್ಣ ಜಖಂ ಆಗಿವೆ. ಕಾರಿನೊಳಗೆ ಸಿಲುಕಿದ್ದ ಹಲವರನ್ನು ಕ್ರೇನ್ ಮೂಲಕ ರಕ್ಷಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಘಟನೆಯಿಂದ ಮೃತಪಟ್ಟ ಕುಟುಂಬಕ್ಕೆ 20 ಲಕ್ಷ ಹಣವನ್ನು ದೆಹಲಿ ಸರ್ಕಾರ ನೀಡಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಹಲವು ವಾಹನಗಳು ಇದರಿಂದ ಜಖಂಗೊಂಡಿವೆ. ಈ ಅಪಘಾತದಿಂದಾಗಿ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಇದುವರೆಗೆ ಒಟ್ಟು 28 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ದೆಹಲಿ ಏರ್‌ಪೋರ್ಟ್ ಟರ್ಮಿನಲ್ – ೧ ಅನ್ನು ನರೇಂದ್ರ ಮೋದಿ ಮೂರು ತಿಂಗಳ ಹಿಂದಷ್ಟೇ ಉದ್ಘಾಟನೆ ಮಾಡಿದ್ದರು.

More articles

Latest article