ದೆಹಲಿ ನೀರಿನ ಬಿಕ್ಕಟ್ಟು: ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Most read

ದೆಹಲಿ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸಚಿವೆ ಅತಿಶಿ ಶುಕ್ರವಾರ ಮಧ್ಯಾಹ್ನ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಿದ್ದಾರೆ. 

ಸಾಧ್ಯವಾದ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಬೋಧಿಸಿದ್ದಾರೆ. ಇಂದಿನಿಂದ ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ. ಬೆಳಗ್ಗೆ 11 ಗಂಟೆಗೆ ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

ಇದಕ್ಕೂ ಮುನ್ನ ಅತಿಶಿ, ಸುನೀತಾ ಕೇಜ್ರಿವಾಲ್, ಎಎಪಿ ಸಂಸದ ಸೌರಭ್ ಭಾರದ್ವಾಜ್, ದೆಹಲಿ ಸಚಿವ ಸೌರಭ್ ಭಾರದ್ವಾಜ್ ಮತ್ತು ಇತರ ನಾಯಕರು ಭೋಗಲ್‌ಗೆ ತೆರಳುವ ಮೊದಲು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಇತರ ಶಾಸಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಜಮಾಯಿಸಿದ್ದು ಅಲ್ಲಿಂದ ರಾಜ್ ಘಾಟ್ ಕಡೆಗೆ ತೆರಳಿದ್ದಾರೆ . ಸಿಎಂ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಕೂಡ ಆಮ್ ಆದ್ಮಿ ಪಕ್ಷದ ನಾಯಕರ ಜೊತೆ ರಾಜ್ ಘಾಟ್ ಗೆ ಬಂದಿದ್ದಾರೆ. ರಾಜ್ ಘಾಟ್‌ನಿಂದ ಎಎಪಿ ನಾಯಕರು ಜಂಗ್‌ಪುರಕ್ಕೆ ತೆರಳಲಿದ್ದು, ಅಲ್ಲಿ ಅತಿಶಿ ಉಪವಾಸ ಆರಂಭಿಸಲಿದ್ದಾರೆ ಎಂದು ಎಎಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

More articles

Latest article