ಶೇ.60ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತಿವೆ: ನಿಮ್ಹಾನ್ಸ್ ಅಧ್ಯಯನ

Most read

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಇತ್ತೀಚಿನ ಅಧ್ಯಯನವು ಶೇ 60 ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ ಎಂದು ತಿಳಿಸಿದೆ.

ನಿಮ್ಹಾನ್ಸ್‌ನ ಸಾರ್ವಜನಿಕ ಆರೋಗ್ಯ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ಗೌತಮ್ ಎಂ ಸುಕುಮಾರ್ ಮಾತನಾಡಿ, ತಲೆಗೆ ಗಾಯವಾದ ಪ್ರಕರಣಗಳು ಮತ್ತು ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರು ಶೇ 60-70 ರಷ್ಟಿದ್ದರೆ, ಶೇ 10 ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಕ್ಕಳಿದ್ದರೂ, ಇದು ದೇಶಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

‘ಅಪ್ರಾಪ್ತ ವಯಸ್ಕರ ಸಂಖ್ಯೆ, ವಿಶೇಷವಾಗಿ 14-18 ವಯಸ್ಸಿನವರು ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಕನಿಷ್ಠ ಶೇ 70 ರಷ್ಟು ಅಪ್ರಾಪ್ತರು ತಲೆ ಗಾಯ ಮತ್ತು ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಿಲುಕುತ್ತಿದ್ದಾರೆ. ರಸ್ತೆ ಸುರಕ್ಷತೆಯನ್ನು ಅರ್ಥಮಾಡಿಕೊಳ್ಳಲು ಅವರು ತುಂಬಾ ಚಿಕ್ಕವರಾಗಿದ್ದು, ಸ್ವತಂತ್ರರಾಗಲು ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ, ರಸ್ತೆಗಳಲ್ಲಿ ಅವರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ಅವರು ಹೇಳಿದರು.

ನಿಮ್ಹಾನ್ಸ್‌ನಲ್ಲಿ ತಿಂಗಳಿಗೆ ಸುಮಾರು 1,000 ಪ್ರಕರಣಗಳು ವರದಿಯಾಗುತ್ತವೆ. ಈ ಪೈಕಿ ದಿನಕ್ಕೆ 25-30 ಪ್ರಕರಣಗಳು ತಲೆಗೆ ಗಾಯಗಳು ಮತ್ತು ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾವುಗಳು ಸಂಭವಿಸುತ್ತವೆ.

ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು, ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ನಿರ್ಣಯಿಸಲು ನಿಮ್ಹಾನ್ಸ್ ಬೆಂಗಳೂರು ಸಂಚಾರ ಪೊಲೀಸರೊಂದಿಗೆ ಕೆಲಸ ಮಾಡುತ್ತಿದೆ. ಗಾಯಗೊಂಡು ಸಾಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ತಂಡವು ಮಕ್ಕಳಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸುತ್ತಿದೆ.

ಸಂಚಾರ ಮತ್ತು ರಸ್ತೆ ಸುರಕ್ಷತಾ ಕಾನೂನುಗಳನ್ನು ಸುಧಾರಿಸುವ ಅಗತ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. “ಅಪ್ರಾಪ್ತ ವಯಸ್ಕನು ವಾಹನವನ್ನು ಓಡಿಸುತ್ತಿರುವುದು ಕಂಡುಬಂದರೆ, ಸವಾರ/ಚಾಲಕನನ್ನು ಮಾತ್ರ ಬುಕ್ ಮಾಡದೇ, ಅಪ್ರಾಪ್ತ ವಯಸ್ಕನ ಪಾಲಕರು ಮತ್ತು ವಾಹನ ಮಾಲೀಕರನ್ನು ಬುಕ್ ಮಾಡಲಾಗುತ್ತದೆ. ಇತರ ಪ್ರಕರಣಗಳಿಗೆ ಹೋಲಿಸಿದರೆ ರಸ್ತೆ ಅಪಘಾತ ಮತ್ತು ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ,”ಎಂದು ಒಪ್ಪಿಕೊಂಡರು.

More articles

Latest article