ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆಗೆ ಕೇಂದ್ರ ವಿಮಾನಯಾನ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ಕೆಲವು ತಿಂಗಳುಗಳ ಹಿಂದ ಸಂಚಾರ ಸ್ಥಗಿತಗೊಳಿಸಿದ್ದ ಹುಬ್ಬಳ್ಳಿ– ಮುಂಬೈ ಇಂಡಿಗೋ 6 ವಿಮಾನ (Hubballi Mumbai Flights) ಮತ್ತೆ ಜುಲೈ 15ರಿಂದ ಪುನಾರಂಭಗೊಳ್ಳಲಿದೆ.
ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈ ಬಿಟ್ಟು ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ಮುಂಬೈ – ಹುಬ್ಬಳ್ಳಿ – ಮುಂಬೈ ನಡುವೆ ಜುಲೈ 15 ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ X ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ATC ದಟ್ಟಣೆಯಿಂದಾಗಿ ಹಲವು ವಿಮಾನಗಳು ವಿಳಂಬವಾಗುತ್ತಿದ್ದು, ಪ್ರಯಾಣಿಕರು ಬಹಳ ಹೊತ್ತು ಕಾಯಬೇಕಾಗಿರುವುದರಿಂದ ಅನನುಕೂಲತೆ ಎದುರಿಸುತ್ತಿದ್ದಾರೆ ಎಂದು ಕಾರಣ ನೀಡಿ ಹುಬ್ಬಳ್ಳಿ – ಮುಂಬೈ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಎಲ್ಲವನ್ನು ಸರಿ ಪಡಿಸಿಕೊಂಡು ಮತ್ತೆ ಮಾರ್ಚ್ ಮೊದಲ ವಾರದಿಂದ ಸೇವೆಯನ್ನು ಪುನರಾರಂಭಿಸುವ ನಿರೀಕ್ಷೆ ಇತ್ತು. ಆದರೀಗ ಪ್ರಹ್ಲಾದ್ ಅವರ ಒತ್ತಾಯದ ಮೇರೆಗೆ ವಿಮಾನ ಹಾರಾಜ ಮತ್ತೆ ಶುರುವಾಗಿದೆ ಎಂಬ ಸುದ್ದಿ ಪ್ರಸಾರವಾಗಿದೆ.