ಬೆಂಗಳೂರು: ಕನ್ನಡ ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಿವಾದಗಳು ಅವರಿಗೆ ಹೊಸದಲ್ಲ. ಆದರೆ ಕೊಲೆ ಪ್ರಕರಣದಲ್ಲಿ ಅವರು ಭಾಗಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಎಂಬ 33 ವರ್ಷ ವಯಸ್ಸಿನ ಯುವಕನ ಕೊಲೆ ಪ್ರಕರಣದ ಆರೋಪ ಈಗ ಅವರ ಮೇಲೆ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ, ರಾಜ್ಯದ ಈಗಿನ ಸಿನಿಮಾ ನಟರ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅನೇಕ ವಿವಾದಗಳನ್ನು ಎದುರಿಸುತ್ತ ಬಂದಿದ್ದಾರೆ. ಕನ್ನಡದ ಹಿರಿಯ ನಟ ದಿ. ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಖ್ಯಾತಿಯ ಜೊತೆಗೆ ವಿವಾದಗಳ ಸರಮಾಲೆಯನ್ನೂ ಹೊತ್ತುಬಂದಿದ್ದಾರೆ. ದರ್ಶನ್ ಅವರ ಪ್ರಮುಖ 15 ವಿವಾದಗಳ ಪಟ್ಟಿ ಇಲ್ಲಿದೆ.
- ಪತ್ನಿ ವಿಜಯ ಲಕ್ಷ್ಮಿ ಮೇಲೆ ಹಲ್ಲೆ. ಈ ಪ್ರಕರಣದಲ್ಲಿ ದರ್ಶನ್ ಕೆಲಕಾಲ ಜೈಲುವಾಸವನ್ನೂ ಅನುಭವಿಸಬೇಕಾಯಿತು.
- ಶ್ರೀರಂಗಪಟ್ಟಣದಲ್ಲಿ ಅಭಿಮಾನಿ ಮೇಲೆ ಹಲ್ಲೆ
- ಪತ್ರಕರ್ತರ ವಿರುದ್ದ ಅಶ್ಲೀಲವಾಗಿ ನಿಂದಿಸಿದ ಆಡಿಯೋ ವೈರಲ್. ಇದರಿಂದಾಗಿ ಹಲವು ವರ್ಷಗಳ ಕಾಲ ದರ್ಶನ್ ಮೇಲೆ ನ್ಯೂಸ್ ಚಾನಲ್ ಗಳು ಬ್ಯಾನ್ ವಿಧಿಸಿದವು.
- ಪುನೀತ್ ರಾಜ್ ಕುಮಾರ್ ವಿರುದ್ಧ ಮಾತು. ಇದರಿಂದಾಗಿ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಫ್ಯಾಮ್ ವಾರ್ ಶುರುವಾಯಿತು.
- ದರ್ಶನ್ ಮತ್ತು ಸುದೀಪ್ ನಡುವೆ ಸ್ನೇಹ ಸಂಬಂಧವಿತ್ತು. ನಂತರ ಮುನಿಸು. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ಫ್ಯಾನ್ ವಾರ್.
- ಅನಧಿಕೃತವಾಗಿ ಕಾಡು ಪ್ರಾಣಿ ಸಾಕಣೆ ವಿವಾದ
- ನಿರ್ಮಾಪಕ ಉಮಾಪತಿ ಜೊತೆ ಜಟಾಪಟಿ.
- ಮೈಸೂರು ಸಂದೇಶ್ ಹೋಟೆಲಿನಲ್ಲಿ ಕಾರ್ಮಿಕರ ಮೇಲೆ ಹಲ್ಲೆ
- ಜೆಟ್ ಲ್ಯಾಗ್ ಹೋಟೆಲಿನಲ್ಲಿ ತಡರಾತ್ರಿ ಪಾರ್ಟಿ. ಪ್ರಕರಣ ದಾಖಲು.
- ತನ್ನ ಆಪ್ತ ಸೂರಜ್ ಸಿನಿಮಾ ನಿಂತುಹೋದ ವಿಚಾರಕ್ಕೆ ನಿರ್ಮಾಪಕ ಭರತ್ ಗೆ ಬೆದರಿಕೆ.
- ನಿರ್ಮಾಪಕ ಜೋಗಿ ಪ್ರೇಮ್ ಅವರನ್ನು ಪುಡಂಗು ಎಂದಿದ್ದು. ದರ್ಶನ್ ಅವರು ಪ್ರೇಮ್ ನಿರ್ದೇಶನದ ಕರಿಯ ಸಿನಿಮಾದ ಮೂಲಕವೇ ಪ್ರಖ್ಯಾತಿಗೆ ಬಂದಿದ್ದರು.
- ಕಾಟೇರ ಸಕ್ಸಸ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಹೇಳನಕಾರಿಯಾಗಿ ಹೇಳಿಕೆ ಆರೋಪ. ಮಹಿಳಾ ಸಂಘಗಳಿಂದ ಟೀಕೆ, ಪ್ರತಿಭಟನೆ.
- ಯಜಮಾನ ಚಿತ್ರೀಕರಣ ಸೆಟ್ ನಲ್ಲಿ ಸಹನಟ ಶಿವಶಂಕರ್ ಎಂಬುವವರ ಮೇಲೆ ಹಲ್ಲೆ.
- ಹುಲಿ ಉಗುರು ಪ್ರಕರಣದಲ್ಲಿ ದರ್ಶನ್ ಮನೆ ಮೇಲೂ ದಾಳಿ ಮಾಡಿದ್ದ ಅರಣ್ಯ ಇಲಾಖೆ. ದರ್ಶನ್ ಅವರಿಂದ ಹುಲಿ ಉಗುರು ವಶಪಡಿಸಿಕೊಳ್ಳಲಾಗಿತ್ತು.
- ದರ್ಶನ್ ಅವರ ಸಾಕು ನಾಯಿ ದಾಳಿ. ದೂರು ದಾಖಲಿಸಿದ್ದ ಮಹಿಳೆ.