ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಚುರಕುಗೊಂಡಿದೆ. ಈಗಾಗಲೇ ನಟ ದರ್ಶನ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ದರ್ಶನ್ ಗೆಳತಿ ಪವಿತ್ರ ಗೌಡ ಅವರನ್ನು ಆರ್.ಆರ್. ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಘಟನೆ ಸಂಬಂದ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಈ ಸಂಬಂಧ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಪತ್ತೆಯಾಗಿತ್ತು. 35 ವರ್ಷ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಅಪೊಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ನಿನ್ನೆ ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಮುಖ ಹಾಗೂ ತಲೆಗೆ ಮತ್ತು ಕಿವಿಗೆ ರಕ್ತದ ಗಾಯ ಆಗಿರೋದು ಕಂಡುಬಂದಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗ್ರಹಿಸಿದ್ದರು.
ತನಿಖೆ ಚುರುಕುಗೊಂಡು ಪ್ರಕರಣಕ್ಕೆ ಸಂಬಂಧಿಸಿದ ಕೆಲವರನ್ನು ಬಂಧಿಸಿದಾಗ ದರ್ಶನ್ ಅವರ ಸುಪಾರಿ ಮೇರೆಗೆ ಈ ಕೊಲೆ ನಡೆದಿದೆ ಎಂದು ಮಾಹಿತಿ ಹೊರಬಿದ್ದಿದೆ. ಇದಾದ ಬೆನ್ನಲ್ಲೇ ದರ್ಶನ್ ಅವರನ್ನು ಬೆಂಗಳೂರಿನ ಪೊಲೀಸರು ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ.
ಹೇಗಾಯ್ತು ಈ ಕೊಲೆ?
ನಟ ದರ್ಶನ್ ಪರಿಚಯಸ್ಥ ಮಹಿಳೆ ಪವಿತ್ರಾ ಗೌಡ ಎಂಬಾಕೆಗೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ.
ರೇಣುಕಾ ಸ್ವಾಮಿಯನ್ನ ಬೆಂಗಳೂರಿಗೆ ಕರೆತರುವಂತೆ ದರ್ಶನ್ ಅವರು ಅವರ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಕರೆ ಮಾಡಿದ್ದರು. ಜೂ 8 ರಂದು ರೇಣುಕಾರನ್ನು ಕರೆಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಅವರಿಗೆ ದರ್ಶನ್ ಸೇರಿ 4 ಜನರಿಂದ ಶೆಡ್ ನಲ್ಲಿ ಬಲವಾದ ಆಯುಧದಿಂದ ಹಲ್ಲೆಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ ಇತ್ತು ಅದರಂತೆ ಅವರನ್ನು ಅಪಹರಿಸಿ ದರ್ಶನ್ ಮುಂದೆಯೇ ಹಲ್ಲೆ ಮಾಡಿದ್ದ ಕಿಡಿಗೇಡಿಗಳು. ಮುಖ, ತಲೆ, ಕಿವಿಗೆ ತೀವ್ರ ಗಾಯಗಳಾಗಿದ್ದವು ಸಾವನಪ್ಪಿದ್ದಾನೆ.
ಇಂದು ಬೆಳಗ್ಗೆ 8.30ಕ್ಕೆ ದರ್ಶನ್ ಅರೆಸ್ಟ್ ಮಾಡಿದ ಪೊಲೀಸರು. ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ದರ್ಶನ್ ಬಂಧನ. ಬೆಂಗಳೂರು ಪೊಲೀಸರಿಂದ ಮೈಸೂರಿನಲ್ಲಿ ದರ್ಶನ್ ಅರೆಸ್ಟ್ ಮಾಡಲಾಗಿದೆ.