ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಭದ್ರತಾ ಅಧಿಕಾರಿಯೊಬ್ಬರು ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ.
ರೈತ ಚಳವಳಿಯಲ್ಲಿ ರೈತ ಮಹಿಳೆಯರ ಬಗ್ಗೆ ಕಂಗನಾ ಹೇಳಿಕೆ ನೀಡಿದ್ದರು. ಇದರಿಂದ ಮನನೊಂದ ಸಿಐಎಸ್‌ಎಫ್ ಮಹಿಳಾ ಯೋಧ ಕುಲ್ವಿಂದರ್ ಕೌರ್ ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಈ ಸಂಬಂಧ ಯೋಧೆ ಕುಲ್ವಿಂದರ್ ನನ್ನು ವಶಕ್ಕೆ ಪಡೆಯಲಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಸಂಸದೆ ಕಂಗನಾ ರನೌತ್ ಮತ್ತು ಯೋಧೆ ಕುಲ್ವಿಂದರ್ ನಡುವೆ ಮಾತಿನ ಚಕಮಕಿ ನಡೆದು, ಯಾರು ಯಾವ ಉದ್ದೇಶಕ್ಕೆ ವಿಮಾನ ನಿಲ್ದಾಣದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ ಆದರೆ ಯೋಧೆಯೇ ಈತರದ ವರ್ತನೆ ತೋರಿದ್ದಾದೆ ಎಂದು ಆರೋಪಿಸಿದ್ದಾರೆ.
ಕಂಗನಾ 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಟಿಕೆಟ್‌ನಲ್ಲಿ ಪಡೆದು ಹುಟ್ಟೂರು ಮಂಡಿಯಿಂದ ಸ್ಪರ್ಧಿಗಿಳಿದಿದ್ದ ಕಂಗನಾ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಂಗನಾ ಭಾರೀ ಮತಗಳ ಅಂತರಲ್ಲಿ ಗೆದ್ದಿದ್ದಾರೆ.