Thursday, July 25, 2024

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಮತ್ತೆ 4 ದಿನ SIT ಕಸ್ಟಡಿಗೆ

Most read

ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಮತ್ತೆ 4 ದಿನ SIT ಕಸ್ಟಡಿಗೆ ನೀಡಿ ಎಸಿಎಂಎಂ 42ನೇ ನ್ಯಾಯಾಲಯ ಆದೇಶ ಕೊಟ್ಟಿದೆ.

ಆರೋಪಿ ಪ್ರಜ್ವಲ್ ರೇವಣ್ಣ SIT ಕಸ್ಟಡಿ ಇಂದು ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಜೂನ್ 10 ರವರೆಗೆ ಕಸ್ಟಡಿಗೆ ನೀಡಿದೆ.

ಎಸ್‍ಐಟಿ ಪರ ವಕೀಲರು ತನಿಖೆಗೆ ಸಮಯ ಸಾಕಾಗಿಲ್ಲ. ಮೊಬೈಲ್ ವಿಚಾರವಾಗಿ ಮಾಹಿತಿ ಇನ್ನೂ ಕೂಡ ಸಿಕ್ಕಿಲ್ಲ. ಮುಖ್ಯವಾಗಿ ಟೈಂ ಶಾರ್ಟೆಜ್ ಆಗಿದೆ. ವಿದೇಶದಲ್ಲಿ ಇದ್ದಾಗ ಹಣ ಹೇಗೆ ಸಂದಾಯ ಆಗಿದೆ ಗೊತ್ತಾಗಿಲ್ಲ. ಇವರು ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಇವರಿಗೆ ಹಣ ನೀಡಿದವರು ಯಾರು ಗೊತ್ತಾಗಬೇಕು ಎಂದು ವಾದಿಸಿದ್ದಾರೆ.

ಮುಂದುವರೆದು, ಕೆಲವು ಸಂತ್ರಸ್ತೆಯರು, ಸಾಕ್ಷಿಗಳನ್ನು ಮುಖಾಮುಖಿ ಮಾಡಬೇಕಾಗಿದೆ. ಏನು ಕೇಳಿದ್ರೂ ಸರಿಯಾದ ಉತ್ತರವನ್ನು ನೀಡಿಲ್ಲ. ನಾನು ಏನು ಮಾಡಿಲ್ಲ ಅಂತ ಪ್ರಜ್ವಲ್ ಹೇಳುತ್ತಾ ಇದ್ದಾರೆ. ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋಗಿದ್ದರು ಹೀಗಾಗಿ ಜೂನ್ 10 ರ ತನಕ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮತ್ತೆ 4 ದಿನಗಳ ಕಾಲ SIT ಕಸ್ಟಡಿಗೆ ಒಪ್ಪಿಸಿದೆ.

More articles

Latest article