ಮೈಸೂರು ಸುತ್ತ-ಮುತ್ತ ಉತ್ತಮ ಮಳೆ; ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

Most read

ಕೇರಳದ ವಯನಾಡು ಸೇರಿದಂತೆನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳ ಹರಿವು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಬಿರು ಬೇಸಿಗೆ ಹಾಗೂ ಮಳೆ ಇಲ್ಲದ್ದರಿಂದ ಜಲಾಶಯದ ಮಟ್ಟ 2,256.37 ಅಡಿಗೆ ಇಳಿದಿದ್ದು, ಜಲಾಶಯದ ಒಳ ಹರಿವು ಕೇವಲ 42 ಕ್ಯೂಸೆಕ್‌ ಇತ್ತು. ಆದರೆ, ಭಾನುವಾರ ಮತ್ತು ಸೋಮವಾರದಂದು ರಾತ್ರಿ ವೇಳೆ ಸತತ ಮಳೆ ಆಗಿದ್ದರಿಂದ ಮಂಗಳವಾರ ಸಂಜೆ ವೇಳೆಗೆ ಜಲಾಶಯದ ಒಳ ಹರಿವು 800 ಕ್ಯೂಸೆಕ್‌ಗೆ ಏರಿದೆ.

ಜಲಾಶಯದ ನೀರಿನ ಮಟ್ಟ 2257 ಅಡಿಗೆ ಏರಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಲಾಶಯದಲ್ಲಿ2252.39 ಅಡಿ ನೀರಿದ್ದು, ಜಲಾಶಯದ ಒಳ ಹರಿವು ಕೇವಲ 50 ಕ್ಯೂಸೆಕ್‌ ಇತ್ತು. ಹೆಚ್​​ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಸದ್ಯ 4356 ಕ್ಯೂಸೆಕ್ ಒಳಹರಿವು ಇದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದು (ಗುರುವಾರ) ನೀರಿನ ಮಟ್ಟ 58 ಅಡಿ ಇದೆ. ಜಲಾಶಯದಲ್ಲಿ 6.36 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯದ ನಿರ್ಮಾಣ ಕಾರ್ಯ 1959ರಲ್ಲಿ ಪ್ರಾರಂಭಗೊಂಡು, ಅದು 1974 ರಲ್ಲಿ ಪೂರ್ಣಗೊಂಡಿತ್ತು. ಬಿದರಹಳ್ಳಿ, ಬೀಚನಹಳ್ಳಿ ಸಮೀಪ ಜಲಾಶಯ ನಿರ್ಮಾಣ ಆಗಿದ್ದು, ಗುಂಡ್ಲುಪೇಟೆ, ನಂಜನಗೂಡು, ಚಾಮರಾಜನಗರ, ತಿ ನರಸೀಪುರ, ಯಳಂದೂರು, ಹಾಗೂ ಕೊಳ್ಳೇಗಾಲ ತಾಲೂಕಿನ 38,670 ಹೆಕ್ಟೇರ್ ಪ್ರದೇಶಕ್ಕೂ ಜಲಾಶಯದ ನೀರನ್ನು ಒದಗಿಸಲಾಗುತ್ತದೆ.

More articles

Latest article