ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು ದೇಶದ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಶೇ. 23.66 ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಳಗ್ಗೆ 11ಗಂಟೆ ವರೆಗೆ ಆಗಿರುವ ಮತದಾನದ ವಿವರ ಹೀಗಿದೆ
ಬಿಹಾರ – 21.11%
ಜಮ್ಮು-ಕಾಶ್ಮೀರ- 21.37%
ಜಾರ್ಖಂಡ್ – 26.18%
ಲಡಾಕ್ – 27.87%
ಮಹಾರಾಷ್ಟ್ರ – 15.93
ಒಡಿಶಾ- 21.07%
ಉತ್ತರಪ್ರದೇಶ- 27.76%
ಪಶ್ಚಿಮ ಬಂಗಾಳ- 32.70%
ಒಟ್ಟು 49 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು ಎಲ್ಲ ಹಂತಗಳ ಚುನಾವಣೆ ಪೈಕಿ ಅತಿ ಕಡಿಮೆ ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯುತ್ತಿದೆ. 695 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಚುನಾವಣೆಯ ಜೊತೆಗೇ ಒರಿಸ್ಸಾ ವಿಧಾನಸಭೆಗೂ ಮತದಾನ ನಡೆಯುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಯ್ ಬರೇಲಿ), ಕೇಂದ್ರ ಸಚಿವ ರಾಜನಾಥ ಸಿಂಗ್ (ಲಕ್ನೋ), ಕೇಂದ್ರ ಸಚಿವೆ ಸ್ಮೃತಿ ಇರಾನಿ (ಅಮೇಠಿ), ಎನ್ ಸಿಪಿ ಮುಖಂಡ ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿದಂತೆ ಹಲವು ಮುಖಂಡರು ಇಂದು ನಡೆಯುತ್ತಿರುವ ಚುನಾವಣೆಯ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ.