ರೇವಣ್ಣ ರಿಲೀಸ್;‌ ಪರಪ್ಪನ ಅಗ್ರಹಾರ ಜೈಲಿನ ಬಳಿ ಜೆಡಿಎಸ್‌ ಕಾರ್ಯಕರ್ತರಿಂದ ರಂಪಾಟ: ಲಾಠಿ ರುಚಿ ತೋರಿಸಿದ ಪೊಲೀಸರು

Most read

ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾಗುತ್ತದ್ದಂತೆ ರೇವಣ್ಣನ ಪರ ಜೆಡಿಎಸ್‌ ಕಾರ್ಯಕರ್ತರು ಘೋಷಣೆ ಕೂಗಿತ್ತಾ, ಸರ್ಕಾರ ವಿರುದ್ಧ ಘೊಷಣೆ ಕೂಗಿ ಪೊಲೀಸರ ಮೇಲೆ ಎರಗಿದ ಘಟನೆ ಪರಪ್ಪನ ಅಗ್ರಹಾರ ಜೈಲಿನ ಮುಂಭಾಗ ನಡೆದಿದೆ.

ಮುನ್ನಚ್ಚರಿಕೆ ಕ್ರಮವಾಗಿ ಜೈಲಿನ ರಸ್ತೆಯಲ್ಲಿ ಡಿಸಿಪಿ‌ ನೇತೃತ್ವದಲ್ಲಿ ‌ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಭದ್ರತೆಗೆ 3 ಜನ ಎಸಿಪಿ, 6 ಜನ ಇನ್ಸ್ಪೆಕ್ಟರ್, 20 ಮಂದಿ ಸಬ್ ಇನ್ಸ್ಪೆಕ್ಟರ್ ಸೇರಿ 250 ಸಿಬ್ಬಂದಿಯಿಂದ‌ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಇಷ್ಟಲ್ಲ ಬಿಗಿ ಭದ್ರತೆ ಇದ್ದರೂ ರೇವಣ್ಣ ಅವರ ಕಾರಿನ ಮೇಲೆ ಕಾರ್ಯಕರ್ತರು ಮುಗಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ. ನಂತರ ಜೆಡಿಎಸ್‌ ಕಾರ್ಯಕರ್ತರು ಪೊಲೀಸರ ಮೇಲೆ ಎರಗಿದ ಘಟನೆ ಸಹ ನಡೆದಿದೆ.

ಆದರೂ ತಮ್ಮ ಹಠ ಬಿಡದ ಜೆಡಿಎಸ್‌ ಕಾರ್ಯಕರ್ತರು ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗುತ್ತಾ. ಸಿಕ್ಕ ಸಿಕ್ಕವರನ್ನು ನೂಕುತ್ತಾ ರಸ್ತೆಯಲ್ಲಿ ಸಾಗುತ್ತಿರುವ ಘಟನೆ ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆಯೇ ನಡೆದಿದೆ.

ಇದರಿಂದಾಗಿ ಕಾರ್ಯಕರ್ತರು ಪೊಲೀಸರು ತಮ್ಮ ಮೇಲೆ ಸುಖಾ ಸುಮ್ಮನೆ ಲಾಠಿಪ್ರಹಾರ ಮಾಡಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.

More articles

Latest article