ಪರಿಷತ್ ಚುನಾವಣೆಯಲ್ಲೂ ಮೈತ್ರಿ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜೆಡಿಎಸ್‌ಗೆ ಕೇವಲ ಒಂದು ಸ್ಥಾನ!

Most read

ಲೋಕಸಭೆ ಚುನಾವಣೆ ನಡುವೆ ನುಂಗಲಾರದ ತುತ್ತಾದ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಬಳಿಕವೂ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ವಿಧಾನ ಪರಿಷತ್‌ ಚುನಾವಣೆಯಲ್ಲೂ ಮುಂದುವರಿಯಲಿದೆ. ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ನಡೆದು ಐದು ಸ್ಥಾನವನ್ನು ಬಿಜೆಪಿ ಇಟ್ಟುಕೊಂಡು ಒಂದು ಸ್ಥಾನವನ್ನು ಜೆಡಿಎಸ್‌ ಗೆ ಬಿಟ್ಟುಕೊಟ್ಟಿದೆ.

ಪರಿಷತ್ ಚುನಾವಣೆಯ ನಾಲ್ಕು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಆರು ಸ್ಥಾನಗಳ ಪೈಕಿ ಬಿಜೆಪಿ 5 ಸ್ಥಾನ ಉಳಿಸಿಕೊಂಡು ಹಿಂದಿನ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್‌ ಜಯಗಳಿಸಿದ್ದರೂ ಕೇವಲ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ. ಈಶಾನ್ಯ ಪದವೀಧರ – ಅಮರನಾಥ ಪಾಟೀಲ್, ನೈಋತ್ಯ ಪದವೀಧರ – ಡಾ.ಧನಂಜಯ್ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರ – ಅ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರ – ವೈ.ನಾರಾಯಣ ಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರ – ಇ.ಸಿ.ಲಿಂಗರಾಜು ರನ್ನು ಕಣಕ್ಕಿಳಿಸಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಜೆಡಿಎಸ್ ನಿಂದ ಎಸ್. ಎಲ್.ಭೋಜೇಗೌಡ ಸ್ಪರ್ಧೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

More articles

Latest article