Thursday, September 19, 2024

ಪ್ರಜ್ವಲ್, ರೇವಣ್ಣ ಬಂಧನದ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

Most read

ಬೆಂಗಳೂರು: ಆರೋಪ ಬಂದ ಕೂಡಲೇ ಯಾರನ್ನೇ ಆದರೂ ಏಕಾಏಕಿ ಬಂಧನ ಮಾಡೋದಕ್ಕೆ ಆಗುವುದಿಲ್ಲ. ಆರೋಪಿಯ ವಿರುದ್ಧ ಬರುವ ದೂರು, ದೂರಿನಲ್ಲಿ ನೀಡಿದ ಹೇಳಿಕೆ ಮತ್ತು ದೂರಿಗೆ ಸಂಬಂಧಪಟ್ಟ ಪುರಾವೆಗಳು ಮುಖ್ಯ ಎಂದು ಗೃಹಸಚಿವ ಜಿ.ಪರಮೇಶ್ವರ ಹೇಳಿದರು.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, SIT ರಚನೆ ಬಳಿಕವೂ ವಿಡಿಯೋ ಲೀಕ್ ಆಗಿರುವ ವಿಚಾರ ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲವನ್ನೂ SIT ಗಮನಿಸುತ್ತದೆ. ಅದಕ್ಕೆ ನಾವೇನು ಹೇಳಲು ಬರೋದಿಲ್ಲ. SIT ತನಿಖಾ ವರದಿ ಬಂದ ಮೇಲೆ ಏನು ಸತ್ಯಾಸತ್ಯತೆ ಇದೆ ಅನ್ನೋದರ ಮೇಲೆ ಕ್ರಮ ಆಗುತ್ತದೆ‌. SIT ವರದಿ ಬರೋವರೆಗೂ ಯಾರೂ ಯಾವುದೇ ಹೇಳಿಕೆ ಕೊಡಬಾರದು ಎಂದು ತಿಳಿಸಿದರು.

ವಿಡಿಯೋ ಲೀಕ್ ಆದವರ ಮೇಲೆ ಕ್ರಮ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರು, ಟರ್ಮ್ಸ್ ಆಫ್ ರೆಫರೆನ್ಸ್ SIT ಯಾವ ರೀತಿ ಮುಂದುವರೆಯುತ್ತೆ ನೋಡೋಣ. ಯಾರಾದ್ರು ದೂರು ಕೊಡಬೇಕು. ಇಂತಹವರು ಲೀಕ್ ಮಾಡಿದ್ದಾರೆ. ಇಂತಹವರು ಮಾಡಿಸಿದ್ದಾರೆ ಅಂತ ಬಂದಾಗ SIT ಕ್ರಮ ತೆಗೆದುಕೊಳ್ಳುತ್ತೆ ಎಂದರು.

ವಿದೇಶದಲ್ಲಿರೋ ಪ್ರಜ್ವಲ್ ಕರೆ ತರುವ ವಿಚಾರವಾಗಿ‌ ಮಾತನಾಡಿ, SIT ಅವರು ಈಗಾಗಲೇ ನೊಟೀಸ್ ಜಾರಿ ಮಾಡಿದ್ದಾರೆ. ಅವರು ಹೊರಗೆ ಹೋಗಿರೋ‌ ಬಗ್ಗೆ ಏರ್ ಟಿಕೆಟ್, ಮಾಹಿತಿ ಎಲ್ಲಾ ಇದೆ. ವಾಪಸ್ ಕರೆದುಕೊಂಡು ಬರೋದಕ್ಕೆ ಏನು ಕ್ರಮ ಆಗಬೇಕೋ ಅದನ್ನ SIT ಮಾಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗಬಹುದು. ಅಥವಾ SIT ಅವರೇ ಕರೆದುಕೊಂಡು ಬರಬಹುದು. SIT ಅವರೇ ಹುಡುಕಿ ಕರೆದುಕೊಂಡು ಬರಬಹುದು. ಯಾವ ಪ್ರೊಸಿಸರ್ ಮಾಡಬೇಕು ಅಂತ SIT ಗೆ ಬಿಟ್ಟಿದ್ದು. SIT ವರದಿ ಬಂದ ಮೇಲೆ ವಿಡಿಯೋ ಲೀಕ್ ಯಾರಿಂದ ಆಗಿದೆ ಅಂತ ಗೊತ್ತಾಗುತ್ತದೆ. ಇದನ್ನು SIT ತನಿಖೆ ಮಾಡುತ್ತೆ ಎಂದರು.

ರೇವಣ್ಣ ಬಂಧನ ಆಗದ ವಿಚಾರವಾಗಿ ಮಾತನಾಡಿ, ಯಾರನ್ನೇ ಆದರು ಏಕಾಏಕಿ ಬಂಧನ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ದೂರು, ಪುರಾವೆ, ದೂರಿನಲ್ಲಿ ನಮೂದಾದ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರಕರಣ ಯಾವ ಸೆಕ್ಷನ್ ಅಡಿ ಬರುತ್ತೆ, ಅದರಲ್ಲಿ ‌ಅರೆಸ್ಟ್ ಮಾಡೋಕೆ ಅವಕಾಶ ಇದೆಯಾ. ಬೇಲ್ ಸಿಗಬಹುದಾದ ಪ್ರಕರಣವಾ? ನಾನ್ ಬೇಲಬಲ್ ಪ್ರಕರಣವಾ ಅಂತ ನೋಡಬೇಕು. ಸದ್ಯ 41a CRPC ಸೆಕ್ಷನ್ ಅಡಿ‌ ನೊಟೀಸ್ ಕೊಟ್ಡಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SIT ಅವರು ಮುಂದಿನ ಪ್ರಕ್ರಿಯೆ ಮಾಡ್ತಾರೆ.

ಅಮಿತ್ ಶಾಗೆ ಗೃಹಸಚಿವ ಪರಮೇಶ್ವರ ತಿರುಗೇಟು

ನಾವು SIT ರಚನೆ ಮಾಡಿ ತನಿಖೆಗೆ ಚಾಲನೆ ಕೊಟ್ಡಿದ್ದೇವೆ. ಏನು ಮಾಡಿಲ್ಲ ಅಂತ ಅಮಿತ್ ಶಾ ಹೇಳಿದ್ದಾರೆ. ಇದರಲ್ಲಿ ಯಾರನ್ನು ರಕ್ಷಣೆ ಮಾಡಿವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನ್ ಮಾಡಬೇಕೋ ಅದನ್ನ ಮಾಡ್ತೀವಿ. ಇದರಲ್ಲಿ ಬಹಳ ಜನರ ಜೀವನ ಇದೆ. ಇಷ್ಟ ಬಂದ ಹಾಗೆ ತನಿಖೆ‌ ಮಾಡೋಕೆ ಆಗೊಲ್ಲ. ಅದಕ್ಕೆ SIT ರಚನೆ ಮಾಡಿದ್ದೇವೆ. ತನಿಖೆ ಶುರುವಾಗಿದೆ. ನೊಟೀಸ್‌ ಕೊಟ್ಟಿದ್ದಾರೆ. ದೂರು ಕೊಟ್ಟವರ ಹೇಳಿಕೆ ಪಡೆದಿದ್ದಾರೆ. ಏನು ಪ್ರಕ್ರಿಯೆ ಇದೆಯೋ ಆ ರೀತಿ ಮಾಡ್ತಿದ್ದಾರೆ ಎಂದಿದ್ದಾರೆ.

More articles

Latest article