ಹಾಸನ: ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದ ಕಾಮಕಾಂಡದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ SIT ಮಹತ್ವದ ಪ್ರಗತಿ ಸಾಧಿಸಿದ್ದು, ಈವರೆಗೆ ಹತ್ತು ಮಂದಿ ಸಂತ್ರಸ್ಥೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಐವರು ಸಂತ್ರಸ್ಥೆಯರು ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿದರು. DySP ಪ್ರಭಾವತಿ ಸಂತ್ರಸ್ಥೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಈವರೆಗೆ ಒಟ್ಟು ಹತ್ತು ಸಂತ್ರಸ್ಥೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಂತಾಗಿದೆ.
ಸಂತ್ರಸ್ತೆಯರ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರನ್ನಾಗಿ ಹಿರಿಯ ನ್ಯಾಯವಾದಿ ಬಿ.ಎನ್.ಜಗದೀಶ್ ಅವರನ್ನು ಈಗಾಗಲೇ ನೇಮಿಸಲಾಗಿದೆ. SIT ತಂಡ ಮೂರು ಪ್ರತ್ಯೇಕ ತಂಡಗಳಾಗಿ ತನಿಖೆಯನ್ನು ಕೈಗೊಂಡಿದೆ.