ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ.39ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸಂಜೆ 4 ಗಂಟೆಯ ಬಳಿಕ ಮತದಾನ ಮತ್ತಷ್ಟು ಚುರುಕಾಗುವ ಸಾಧ್ಯತೆ ಇದ್ದು, ಉರಿಬಿಸಿಲಿನ ಕಾರಣದಿಂದ ಹಲವೆಡೆ ಮತದಾರರು ಇನ್ನೂ ಮನೆಗಳಿಂದ ಹೊರಗೆ ಬಂದಿಲ್ಲ.
ದ.ಕನ್ನಡದಲ್ಲಿ ಮಧ್ಯಾಹ್ನ 1ರವರೆಗೆ ಅತಿಹೆಚ್ಚು ಅಂದರೆ ಶೇ.48.10ರಷ್ಟು ಮತದಾನ ನಡೆದಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.30.10, ಬೆಂಗಳೂರು ಉತ್ತರದಲ್ಲಿ ಶೇ.32.25, ಬೆಂಗಳೂರು ಗ್ರಾಮಾಂತರದಲ್ಲಿ ಶೇ.36.09. ಬೆಂಗಳೂರು ದಕ್ಷಿಣದಲ್ಲಿ ಶೇ. 31.51. ಮೈಸೂರಿನಲ್ಲಿ ಶೇ. 41.58, ಮಂಡ್ಯದಲ್ಲಿ ಶೇ.40.70ರಷ್ಟು, ಉಡುಪಿ-ಚಿಕ್ಕಮಗಳೂರಲ್ಲಿ ಈವರೆಗೆ ಶೇ46.43ರಷ್ಟು ಮತದಾನ ನಡೆದಿದೆ.
ಒಟ್ಟಾರೆಯಾಗಿ ಈಗ ಮತದಾನ ನಡೆಯುತ್ತಿರುವ14 ಕ್ಷೇತ್ರಗಳಲ್ಲಿ ಮಧ್ಯಾಹ್ನ 1ರವರೆಗೆ 38.23%ರಷ್ಟು ಮತದಾನ ನಡೆದಿದೆ.