ಕೊಟ್ಟ ಭರವಸೆ ಈಡೇರಿಸುವ ಏಕೈಕ ಪಕ್ಷ ಕಾಂಗ್ರೆಸ್: ಪ್ರಿಯಾಂಕಾ ಗಾಂಧಿ

Most read

ಬೆಂಗಳೂರು: ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿ ಹೋಗಿದ್ದೆ. ನಮ್ಮ ಮನವಿಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಅದರಂತೆ ನಮ್ಮ ಸರಕಾರವೂ ಸಹ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ನಗರದ ಎಚ್.ಎಸ್.ಆರ್ ಲೇಔಟ್ ನಲ್ಲಿ‌ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯಂತೆ ಎಲ್ಲ ಬಡ ಮಹಿಳೆಯರಿಗೆ 2 ಸಾವಿರ ರೂ. ತಲುಪುತ್ತಿದೆ. ಗೃಹಜ್ಯೋತಿಯಿಂದ ಮನೆ ಬೆಳಗುತ್ತಿದೆ. ಅನ್ನಭಾಗ್ಯ ಯೋಜನೆಯಿಂದ 4 ಕೋಟಿ ಕುಟುಂಬದವರಿಗೆ ರೇಶನ್ ತಲುಪುತ್ತಿದೆ. ನನ್ನ ಅಕ್ಕ ತಂಗಿಯರು ಶಕ್ತಿ ಯೋಜನೆಯಿಂದ ಉಚಿತವಾಗಿ ಬಸ್ಸಿನಲ್ಲಿ  ಓಡಾಡುತ್ತಿದ್ದಾರೆ. ಯುವಕರಿಗೆ ಯುವನಿಧಿ  ಯೋಜನೆ  ಸಹ ತಲುಪುತ್ತಿದೆ ಎಂದರು.

ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಅಂತಾ ಇದ್ದರೆ ಅದು ಕಾಂಗ್ರೆಸ್. ಈ ಚುನಾವಣೆಯಲ್ಲಿ ನಮ್ಮ ಪ್ರಣಾಳಿಕೆಯನ್ನೇ ನಾವು ನ್ಯಾಯ ಪತ್ರ ಎಂದು ಕರೆದಿದ್ದೇವೆ. ಏಕೆಂದರೆ ಯಾರಿಗೂ ಅನ್ಯಾಯ ಆಗಬಾರದು. ಪ್ರತಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡಲಿದ್ದೇವೆ. ಮೊದಲ ಬಾರಿಗೆ ಯುವಕರಿಗೆ ಅಪ್ರೇಂಟಿಸ್ ಪ್ರೋಗಾಂ ಶುರು ಮಾಡಲಿದ್ದೇವೆ. ಪ್ರತಿಯೊಂದು ಜಿಲ್ಲೆಯಲ್ಲಿ 5 ಸಾವಿರ ಕೋಟಿಯ ಸ್ಟಾರ್ಟಪ್ ಪೋಗ್ರಾಂ ಶುರು ಮಾಡಲಿದ್ದೇವೆ. ಶ್ರಮಿಕ್ ನ್ಯಾಯ್ ಅಡಿ ಕನಿಷ್ಡ 400 ರೂ. ವೇತನ ಕೊಡಲಿದ್ದೇವೆ. ದೇಶದಲ್ಲಿ ಬೆಲೆಏರಿಕೆಯಿಂದ ಎಲ್ಲರಿಗೂ ಕಷ್ಟ ಆಗಿದೆ. ನಿಮ್ಮ ಮುಂದೆ ಇರೋದು ಎರಡು ಕಷ್ಟ. ಒಂದು ಬೆಲೆ ಏರಿಕೆ ಇನ್ನೊಂದು ನಿರುದ್ಯೋಗ. ಇಂದು ಪ್ರತಿಯೊಬ್ಬರಿಗೂ ಮನೆ ನಿರ್ವಹಣೆಯ ಕಷ್ಟ ಅರಿವಿಗೆ ಬಂದಿದೆ. ಪೆಟ್ರೋಲ್ ಡೀಸೆಲ್ ಬೆಲೆ  ಜಾಸ್ತಿ ಆಯ್ತು. ಅಡುಗೆ ಎಣ್ಣೆ ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಇದರ ಜೊತೆ ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಕಾಡುತ್ತಿದೆ. ಇದೆಲ್ಲದರಿಂದ ಮುಕ್ತಿಗಾಗಿ ಈ ಬಾರಿ ಕಾಂಗ್ರೆಸ್ ಆಯ್ಕೆ ಮಾಡುವುದೊಂದೇ ಪರಿಹಾರ ಎಂದರು.

ಸಮಾವೇಶದಲ್ಲಿ ಭಾಗಿಯಾದ ಪ್ರಿಯಾಂಕಾ ಗಾಂಧಿ, ಸುರ್ಜೇವಾಲ, ಡಿಸಿಎಂ ಡಿ.ಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಸಚಿವರಾದ ಕೆ.ಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತಯಾಚನೆ ಮಾಡಿದರು.

More articles

Latest article