ಛತ್ತೀಸಗಢದಲ್ಲಿ ಮೂವರು ನಕ್ಸಲರ ಹತ್ಯೆ

ರಾಯಪುರ: ಇತ್ತ ಕರ್ನಾಟಕದಲ್ಲಿ ನಕ್ಸಲರು ಶರಣಾಗಲು ಆರಂಭಿಸಿದ್ದರೆ ಅತ್ತ ಛತ್ತೀಸಗಢ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ಇಂದು ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಈ ಕುರಿತು ಛತ್ತೀಸಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಮಾಹಿತಿ ನೀಡಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಯಶಸ್ಸನ್ನು ಸಾಧಿಸಿವೆ.ಈವರೆಗೆ ಮೂವರು ನಕ್ಸಲರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ರಾಯಪುರದಲ್ಲಿ ತಿಳಿಸಿದ್ದಾರೆ. ಜನವರಿ 6ರಂದು ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರ ಐಇಡಿ ದಾಳಿಯಲ್ಲಿ ಎಂಟು ಪೂಲೀಸರು ಹಾಗೂ ಕಾರಿನ ಚಾಲಕ ಹುತಾತ್ಮರಾಗಿದ್ದರು.

ಭದ್ರತಾ ಸಿಬ್ಬಂದಿಯನ್ನು ನಾನು ಭೇಟಿಯಾಗಿದ್ದೇನೆ. ನಮ್ಮ ಯೋಧರಿಗೆ ಧೈರ್ಯ ತುಂಬಿದ್ದೇನೆ. ನಕ್ಸಲರ ಈ ಕೃತ್ಯದ ವಿರುದ್ಧ ಸೈನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಿಗದಿತ ಅವಧಿಯೊಳಗೆ ನಕ್ಸಲರನ್ನು ನಿಗ್ರಹ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಸುಕ್ಮಾ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ನಡೆದಿದೆ. ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ವರ್ಷ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇದುವರೆಗೆ ಒಂಬತ್ತು ಮಂದಿ ನಕ್ಸಲರನ್ನು ನಿಗ್ರಹಿಸಲಾಗಿದೆ. ಜನವರಿ 6ರಂದು ನಾರಾಯಣಪುರ, ದಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ನಕ್ಸರನ್ನು ಹತ್ಯೆಗೈಯಲಾಗಿತ್ತು. ಜನವರಿ 3 ರಂದು ಗರಿಯಾಬಂದ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್ ಹತನಾಗಿದ್ದ. 2024 ರಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ 219 ನಕ್ಸಲರನ್ನು ಹತ್ಯೆ ಮಾಡಿತ್ತು.

More articles

Latest article

Most read