ಬೆಂಗಳೂರಿನಲ್ಲಿ ರೂ. 3.5 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ; ಎಂಬಿಎ ಪದವೀಧರ ಸೇರಿ ಇಬ್ಬರ ಬಂಧನ

Most read

ಬೆಂಗಳೂರು: ಹೊಸ ವರ್ಷಾಚರಣೆ ಮುಗಿದರೂ ಬೆಂಗಳೂರು ನಗರದಲ್ಲಿ ಡ್ರಗ್ಸ್‌ ಹಾವಳಿ ನಿಂತಿಲ್ಲ. ಮಾದಕ ವಸ್ತು ಮಾರಾಟ ಮಾಡಲು ಹವಣಿಸುತ್ತಿದ್ದ ಎಂಬಿಎ ಪದವೀಧರ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೂ. 3.5 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಎಂಬಿಎ ಪದವೀಧರ ಮೊಹಮದ್‌ ತಾರಿಖ್‌ (34) ಹಾಗೂ ಕಾಡುಗೋಡಿ ನಿವಾಸಿ, ಶೇಖ್‌ ಅಹಮದ್‌ ಅರಬತ್‌ ಖಾನ್‌ (29) ಎಂಬುವರನ್ನು ಬಂಧಿಸಿರುವ ಅಶೋಕನಗರ ಠಾಣೆ ಪೊಲೀಸರು ಅವರಿಂದ ರೂ.3.5 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಬಾಣಸವಾಡಿ ನಿವಾಸಿಗಳು ಎಂದು ತಿಳಿದು ಬಂದಿದೆ.

ಮೊಹಮದ್‌ ತಾರಿಖ್‌ ಖಾಸಗಿ ಕಂಪನಿಯಲ್ಲಿಉದ್ಯೋಗಿಯಾಗಿದ್ದರೆ ಶೇಖ್‌ ಅಹಮದ್‌ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರ ಮಾಡುತ್ತಿದ್ದ. ಇವರು ವಿದೇಶಿ ಪ್ರಜೆಗಳಿಂದ ಡ್ರಗ್ಸ್‌ ಖರೀದಿಸಿ ನಗರದ ಗ್ರಾಃಕರಿಗೆ ಮಾರಾಟ ಮಾಡುತ್ತಿದ್ದರು. ಹೊಸವರ್ಷಾಚರಣೆ ವೇಳೆ ಎಂಡಿಎಂಎ ಕ್ರಿಸ್ಟಲ್‌ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನಾಧರಿಸಿ ಎನ್‌ಡಿಪಿಎಸ್‌‍ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಡಿ.31 ರಂದು ಹೊಸೂರು ರಸ್ತೆಯ ಹಿಂದೂ ಸಶಾನದ ಬಳಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆತ ನೀಡಿದ ಸುಳಿವು ಆಧರಿಸಿ ಮತ್ತೊಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ಸುದೀರ್ಘ ವಿಚಾರಣೆ ನಡೆಸಿದ ನಂತರ ಸ್ಮಶಾನದಲ್ಲಿರುವ ಸಮಾಧಿಯೊಂದರ ಪಕ್ಕದಲ್ಲಿ ಅಡಗಿಸಿಟ್ಟಿದ್ದ 2 ಕೆ.ಜಿ 480 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಅನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article