ಬೆಂಗಳೂರಿನಲ್ಲಿ 3.25ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ ; ದಂಪತಿ ಬಂಧನ

ಬೆಂಗಳೂರು: ಹೊಸ ವರ್ಷದ ಆಚರಣೆಗೆ ಎಂದು ತರಿಸಲಾಗಿದ್ದ 318 ಕೆಜಿ ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಭ್ಯವಾದ ಖಚಿತ ಮಾಹಿತಿಯನ್ನಾಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. 318 ಕೆಜಿ ಗಾಂಜಾ ಬೆಲೆ 3 ಕೋಟಿ 25 ಲಕ್ಷ ರೂಪಾಯಿ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಈ ಗಾಂಜಾವನ್ನು ಡ್ರಗ್ ಪೆಡ್ಲರ್ ಜತೆ ಸಾಗಿಸುತ್ತಿದ್ದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಮೀರ್ ರೇಷ್ಮಾ ಬಂಧನಕ್ಕೊಳಗಾದ ದಂಪತಿ. ಒಡಿಶಾದಿಂದ ಬೆಂಗಳೂರಿಗೆ ಎರ್ಟಿಗಾ ಕಾರ್ ನಲ್ಲಿ ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಪೊಲೀಸರು ತಮಗೆ ಲಭ್ಯವಾದ ಮಾಹಿತಿಯನ್ನಾಧರಿಸಿ HBR ಲೇಔಟ್ ಬಳಿ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ಧ NDPS ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

More articles

Latest article

Most read