ದೇಶಾದ್ಯಂತ ಬಿರುಸು ಪಡೆದ ಚುನಾವಣಾ ಸಂಭ್ರಮ: ಕರ್ನಾಟಕದಲ್ಲಿ ಶೇ.22ರಷ್ಟು ಮತದಾನ

Most read

ಬೆಂಗಳೂರು: ರಾಜ್ಯದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೇ.22 ರಷ್ಟು ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಅತಿಹೆಚ್ಚು ಮತದಾನವಾಗಿದ್ದು, ಶೇ. 30.98ರಷ್ಟು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಶೇ. 19.21 ಮತದಾನವಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇ. 19.78ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ. 20.35 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ. 19.81ರಷ್ಟು ಮತದಾನವಾಗಿದೆ.

ಚಾಮರಾಜನಗರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಶೇ. 22.81ರಷ್ಟು ಮತದಾನವಾಗಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಶೇ. 21.92ರಷ್ಟು ಮತದಾನವಾಗಿದೆ. ಹಾಸನದಲ್ಲಿ ಶೇ. 20.03, ಕೋಲಾರದಲ್ಲಿ ಶೇ.20.73, ಮಂಡ್ಯದಲ್ಲಿ ಶೇ. 21.24, ಮೈಸೂರಿನಲ್ಲಿ ಶೇ. 25.09 ಮತದಾನವಾಗಿರುವ ವರದಿಯಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಇಂದು ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಅಸ್ಸಾಂನಲ್ಲಿ ಶೇ. 27, ಬಿಹಾರದಲ್ಲಿ ಶೇ.21, ಕೇರಳದಲ್ಲಿ ಶೇ.26, ಮಧ್ಯಪ್ರದೇಶದಲ್ಲಿ ಶೇ.28, ಅಸ್ಸಾಂನಲ್ಲಿ ಶೇ.27, ಛತ್ತೀಸ್ ಗಡದಲ್ಲಿ ಶೇ.35, ಜಮ್ಮುಕಾಶ್ಮೀರದಲ್ಲಿ ಶೇ. 27ರಷ್ಟು ಮತದಾನವಾಗಿರುವ ವರದಿಗಳು ಬಂದಿವೆ.

More articles

Latest article