2026 IPL :  ರಾಜಸ್ಥಾನದ ‘ಸ್ಮಾರ್ಟ್ ಕ್ರಿಕೆಟ್’ ಹಾಗೂ ಗುಜರಾತ್ ಭದ್ರಕೋಟೆಯ ನಡುವೆ ಹಣಾಹಣಿ

ಅಹಮದಾಬಾದ್  ಏ.4 : ಇಂಡಿಯನ್ ಪ್ರೀಮಿಯರ್ ಲೀಗ್‌(IPL) ನಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. ಹೊಸ ಮಾಲೀಕತ್ವ, ಹೊಸ ನಾಯಕ ಹಾಗೂ ಹೊಸ ತರಬೇತುದಾರರೊಂದಿಗೆ ಮೈದಾನಕ್ಕಿಳಿದಿರುವ ರಾಜಸ್ಥಾನ್ ರಾಯಲ್ಸ್ (RR) ತಂಡವು ಈ ಬಾರಿ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದೆ. ರಿಯಾನ್ ಪರಾಗ್ ಹೇಳುವಂತೆ, ತಂಡವು ಈ ಬಾರಿ ‘ಸ್ಮಾರ್ಟ್ ಕ್ರಿಕೆಟ್’ ಮಂತ್ರವನ್ನು ಜಪಿಸುತ್ತಿದೆ. ಅಂದರೆ, ಕೇವಲ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡದೆ, ಕ್ರೀಡಾಂಗಣದ ಪರಿಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದು ಇವರ ಮುಖ್ಯ ಗುರಿಯಾಗಿದೆ.

ಕುಮಾರ್ ಸಂಗಕ್ಕಾರ ಅವರ ಮಾರ್ಗದರ್ಶನದಲ್ಲಿ ಪಳಗಿರುವ ರಿಯಾನ್ ಪರಾಗ್, ಗುವಾಹಟಿಯಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ತಮ್ಮ ಈ ಹೊಸ ಶೈಲಿಯ ಆಟವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಆಲ್ ರೌಂಡ್ ಪ್ರದರ್ಶನದ ಮೂಲಕ ರಾಯಲ್ಸ್ ಪಡೆ ಗೆಲುವಿನ ನಗೆ ಬೀರಿದ್ದು, ಇದೀಗ ಅಹಮದಾಬಾದ್‌ನತ್ತ ಮುಖ ಮಾಡಿದೆ.

ಟೈಟನ್ಸ್ ಭದ್ರಕೋಟೆಯಲ್ಲಿ ಸವಾಲು:

ರಾಜಸ್ಥಾನಕ್ಕೆ ಮುಂದಿರುವ ಹಾದಿ ಸುಲಭವಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್ ಟೈಟನ್ಸ್ ತಂಡದ ಭದ್ರಕೋಟೆಯಿದ್ದಂತೆ. ಇಲ್ಲಿನ ಅಗ್ರ ಕ್ರಮಾಂಕದ ಬ್ಯಾಟರ್‌ಗಳು 50ಕ್ಕೂ ಹೆಚ್ಚು ಸರಾಸರಿ ಹಾಗೂ 155ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸುವ ದಾಖಲೆ ಹೊಂದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವಿಭಾಗ ಅಷ್ಟಾಗಿ ಮಿಂಚದಿದ್ದರೂ, ಬೌಲರ್‌ಗಳ ಸಂಘಟಿತ ಹೋರಾಟದಿಂದ ಗುಜರಾತ್ ಜಯ ಸಾಧಿಸಿತ್ತು.

ಇವತ್ತು ರಾತ್ರಿ ನಡೆಯಲಿರುವ ಈ ಪಂದ್ಯವು ಭಾರೀ ಕುತೂಹಲ ಕೆರಳಿಸಿದೆ. ಅಹಮದಾಬಾದ್‌ನ ಪಿಚ್ ಪರಿಸ್ಥಿತಿಯನ್ನು ರಾಜಸ್ಥಾನದ ಆಟಗಾರರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ಇಲ್ಲಿ ಮುಖ್ಯವಾಗಿದೆ. ಒಂದು ಕಡೆ ತವರಿನ ಮೈದಾನದ ಪೂರ್ಣ ಅರಿವಿರುವ ಗುಜರಾತ್ ಟೈಟನ್ಸ್ ಇದ್ದರೆ, ಮತ್ತೊಂದೆಡೆ ಬುದ್ಧಿವಂತಿಕೆಯಿಂದ ಆಡಲು ಸಜ್ಜಾಗಿರುವ ರಾಜಸ್ಥಾನ್ ರಾಯಲ್ಸ್ ಇದೆ. ಈ ಎರಡು ಬಲಿಷ್ಠ ತಂಡಗಳ ನಡುವಿನ ಸೆಣಸಾಟದಲ್ಲಿ ಯಾರ ‘ಸ್ಮಾರ್ಟ್’ ಆಟ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

More articles

Latest article

Most read