Saturday, July 27, 2024

41,000 ಕೋಟಿ ಮೌಲ್ಯದ 2000ಕ್ಕೂ ಹೆಚ್ಚು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಚಾಲನೆ

Most read

ನವದೆಹಲಿ : ಸುಮಾರು 41,000 ಕೋಟಿ ರೂಪಾಯಿ ಮೌಲ್ಯದ 2,000 ಕ್ಕೂ ಹೆಚ್ಚು ರೈಲು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ಮಾಡಿ ಮಾತನಾಡಿದ ಅವರು, ಭಾರತವು ಈಗ ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಆ ಕನಸುಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ವಂದೇ ಭಾರತ್ ರೈಲುಗಳ ಪ್ರಾರಂಭ, ಸ್ವಚ್ಛತೆ ಮತ್ತು ಹಳಿಗಳ ವಿದ್ಯುದ್ದೀಕರಣಕ್ಕೆ ಒತ್ತು ಸೇರಿದಂತೆ ರೈಲ್ವೆ ವಿಭಾಗದಲ್ಲಿ ದೇಶವು ಪರಿವರ್ತನೆಗೊಂಡಿದೆ. ಇದರ ಮೂಲಕ ನವ ಭಾರತ ನಿರ್ಮಾಣ ಆಗಿರುವುದನ್ನು ಜನರು ನೋಡಿದ್ದಾರೆ ಎಂದರು.

ನಮ್ಮ ಆಡಳಿತವು ಸಾರ್ವಜನಿಕ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಿದೆ ಮತ್ತು ಗಳಿಸಿದ ಪ್ರತಿ ಪೈಸೆಯನ್ನು ರೈಲ್ವೆ ಸೇವೆಗಳನ್ನು ವಿಸ್ತರಿಸಲು ಬಳಸಲಾಗಿದೆ. 2014 ಕ್ಕಿಂತ ಹಿಂದಿನ ಸರ್ಕಾರಗಳು ಏನನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೊದಲು ಭಾರತೀಯ ರೈಲ್ವೇ ರಾಜಕೀಯದ ಬಲಿಪಶುವಾಗಿತ್ತು ಆದರೆ ಈಗ ಇದು ಪ್ರಯಾಣದ ಮುಖ್ಯ ಆಧಾರವಾಗಿದೆ ಮತ್ತು ಉದ್ಯೋಗದ ದೊಡ್ಡ ಮೂಲವಾಗಿದೆ. ಜೊತೆಗೆ ಸ್ಥಳೀಯ ಸಂಸ್ಕೃತಿ ಮತ್ತು ಕುಶಲಕರ್ಮಿಗಳನ್ನು ಉತ್ತೇಜಿಸಲು ರೈಲ್ವೆ ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ ಎಂದರು.

ಯುವಕರ ಕನಸುಗಳು ನನ್ನ ಸಂಕಲ್ಪವಾಗಿದೆ. ಕಠಿಣ ಪರಿಶ್ರಮ ಮತ್ತು ನನ್ನ ಸಂಕಲ್ಪಗಳು ವಿಕಸಿತ ಭಾರತದ ಭರವಸೆ ಎಂದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ದೇಶದ ನೂರಾರು ಸಂಸದರು ಮತ್ತು ಶಾಸಕರು, ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡರು.

More articles

Latest article