ದೇವನಹಳ್ಳಿ: ಅಕ್ರಮವಾಗಿ ಶ್ರೀಲಂಕಾಗೆ ಸಾಗಿಸುತ್ತಿದ್ದ 2. 12 ಕೋಟಿ ರೂ ವಿದೇಶಿ ಹಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಜಾರಿ ನಿರ್ದೆಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಲಂಕಾ ಮೂಲದ ವಿಮಲ್ ರಾಜ್ ತುರೈ ಸಿಂಗಂ, ತಿಲೆಪನ್ ಜಯಂತಿ ಕುಮಾರ್, ಭಾರತದ ವೀರ ಕುಮಾರ್ ಬಂಧಿತ ಆರೋಪಿಗಳು. ಇವರು ಲಗೇಜ್ ಬ್ಯಾಗ್ ನಲ್ಲಿ ಹಣವನ್ನು ಅಡಗಿಸಿಟ್ಟುಕೊಂಡು ಹಣ ಸಾಗಿಸಲು ಪ್ರಯತ್ನ ನಡೆಸಿದ್ದರು. ಆದರೆ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
ಪ್ರಯಾಣಿಕರ ಲಗೇಜ್ ಬ್ಯಾಗ್ ನಲ್ಲಿ ಹಣವಿಟ್ಟುಕೊಂಡು ಮೂವರು ಆರೋಪಿಗಳು ಪ್ರವೇಶಿಸುತ್ತಿದ್ದರು. ಕೆಐಎಬಿಯಲ್ಲಿ ಇಮಿಗ್ರೇಷನ್ ಚೆಕ್ಕಿಂಗ್ ವೇಳೆ ಈ ಬಾರಿ ಮೊತ್ತದ ಹಣ ಪತ್ತೆ ಆಗಿದೆ. ಹಣ ಕಂಡು ಬರುತ್ತಿದ್ದಂತೆ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಹಣ ಮತ್ತು ಆರೋಪಿಗಳನ್ನ ಒಪ್ಪಿಸಿದ್ದಾರೆ. ಇಡಿ ಅಧಿಕಾರಿಗಳು ಮೂವರನ್ನು ಬಂಧಿಸಿ ಹಣದ ಮೂಲವನ್ನು ಪತ್ತೆ ಹಚ್ಚಲು ವಿಚಾರಣೆ
ನಡೆಸುತ್ತಿದ್ದಾರೆ.