“ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಜಾತಿ ಜನಗಣತಿ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಜಾತಿ ಗಣತಿ ಮಾಡುತ್ತೇವೆ, ಅಲ್ಲದೆ ಜನಗಣತಿಯ ಆಧಾರದಲ್ಲಿ ಎಲ್ಲರಿಗೂ ಅವಕಾಶವನ್ನು ಸಮಾನವಾಗಿ ಹಂಚುತ್ತೇವೆ” – ರಾಹುಲ್ ಗಾಂಧಿ
ಇಂದು (29.01.2024) ಪಶ್ಚಿಮ ಬಂಗಾಳದಲ್ಲಿ ಕೆಲ ಕಾಲ ಮುಂದುವರಿದ ಯಾತ್ರೆ ಬಳಿಕ ಉತ್ತರ ದಿನಾಜ್ ಪುರ ಚೋಪ್ರಾದಿಂದ ಕಿಶನ್ ಗಂಜ್ ಮೂಲಕ ಬಿಹಾರವನ್ನು ಪ್ರವೇಶಿಸಿದೆ.
ಗಡಿಯಲ್ಲಿ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಮತ್ತು ಬಿಹಾರ ಕಾಂಗ್ರೆಸ್ ಅಧ್ಯಕ್ಷರಾದ ಅಖಿಲೇಶ್ ಪ್ರಸಾದ್ ಸಿಂಗ್ ನಡುವೆ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಎಂದಿನಂತೆ ಭಾರೀ ಜನಸಂಖ್ಯೆ ರಾಹುಲ್ ನೇತೃತ್ವದ ಯಾತ್ರಾರ್ಥಿಗಳನ್ನು ಸ್ವಾಗತಿಸಿತು. ಸುಮಾರು ಒಂದೂವರೆ ಲಕ್ಷ ಜನ ಸೇರಿರಬಹುದು ಎಂದು ವರದಿಗಳು ಹೇಳಿವೆ.
4.30 ಕ್ಕೆ ಅರಾರಿಯದಲ್ಲಿ ಪಾದಯಾತ್ರೆ ನಡೆಯಿತು. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು ತಾವು ಈ ಯಾತ್ರೆಯನ್ನು ಯಾಕೆ ಮಾಡುತ್ತಿದ್ದೇವೆ ಎಂಬುದನ್ನು ವಿವರಿಸಿದರು. ಅಲ್ಲದೆ “ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಜಾತಿ ಜನಗಣತಿ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಜಾತಿ ಗಣತಿ ಮಾಡುತ್ತೇವೆ, ಅಲ್ಲದೆ ಜನಗಣತಿಯ ಆಧಾರದಲ್ಲಿ ಎಲ್ಲರಿಗೂ ಅವಕಾಶವನ್ನು ಸಮಾನವಾಗಿ ಹಂಚುತ್ತೇವೆ” ಎಂದರು.
ಇಂದಿನ ಯಾತ್ರೆಯು ಬಿಹಾರದ ಅರಾರಿಯಾದ MLDPK ಯಾದವ್ ಇಂಟರ್ ಕಾಲೇಜ್ ನಲ್ಲಿ ತಂಗುವುದರ ಮೂಲಕ ಸಂಪನ್ನಗೊಂಡಿತು
ಶ್ರೀನಿವಾಸ ಕಾರ್ಕಳ, ಮಂಗಳೂರು