ಹೊಸದಿಲ್ಲಿ: ಕಡಿಮೆ ಗೋಚರತೆಯ ಪರಿಸ್ಥಿತಿಗಳು ಉಂಟಾದ ಕಾರಣ ಇಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಬೇಕಾಗಿರುವ ಹತ್ತು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಹಲವು ವಿಮಾನಗಳು ಸಂಚಾರಗಳು ಸಹ ವಿಳಂಬಗೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು (ಬುಧವಾರ) ಬೆಳಗ್ಗೆ ದೆಹಲಿಯಲ್ಲಿ ಉಂಟಾದ ಕೆಟ್ಟ ಹವಾಮಾನದಿಂದಾಗಿ ಒಂಬತ್ತು ವಿಮಾನಗಳನ್ನು ಜೈಪುರಕ್ಕೆ ಮತ್ತು 1 ಅನ್ನು ಲಕ್ನೋಗೆ ಬೆಳಿಗ್ಗೆ 7 ಗಂಟೆಯಿಂದ ತಿರುಗಿಸಲಾಗಿದೆ ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಿಂದಾಗಿ ಅನೇಕ ವಿಮಾನಗಳು ವಿಳಂಬಗೊಂಡವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಿಗ್ಗೆ 5.30 ರ ಸುಮಾರಿಗೆ ತುಂಬಾ ದಟ್ಟವಾದ ಮಂಜು ರೂಪುಗೊಳ್ಳಲು ಪ್ರಾರಂಭಿಸಿತು ಎಂದು ಭಾರತೀಯ ಹವಾಮಾನ ಇಲಾಖೆ (IMD) ವರದಿ ಮಾಡಿದೆ. ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ದಟ್ಟವಾದ ಮಂಜು ಕವಿದಿದೆ.
ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IGIA) ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಮತ್ತು ಪ್ರತಿದಿನ ಸುಮಾರು 1,400 ವಿಮಾನಗಳ ಚಲನೆಯನ್ನು ನಿರ್ವಹಿಸುತ್ತದೆ.