ಸುಳ್ಳು ಪ್ರಕರಣ: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ 1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

Most read

ಬೆಂಗಳೂರು: 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಶಿಗೆ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ 1.20 ಲಕ್ಷ ರೂ.ಗಳ ದಂಡ ವಿಧಿಸಿದೆ. ಮಹೇಶ್ ಜೋಶಿ ಅವರು ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದಾರೆ. ದಂಡದ ಮೊತ್ತವನ್ನು ವಾರ್ಷಿಕ ಶೇ 24ರಷ್ಟು ಬಡ್ಡಿ ಸಹಿತ ದೂರುದಾರರಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆದೇಶಿಸಿದೆ.

1984ರಲ್ಲಿ ದೂರದರ್ಶನ ನಿರ್ದೇಶಕರಾಗಿದ್ದಾಗ ಮಹೇಶ್ ಜೋಶಿ ಅವರು ಮೋಹನ್ ರಾಂ ಸೇರಿದಂತೆ ಏಳು ಸಹೋದ್ಯೋಗಿಗಳ ವಿರುದ್ಧ ವಂಚನೆ
ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣ ಸುಳ್ಳು ಎಂದು 2013ರಲ್ಲಿ ಹೈಕೋರ್ಟ್ ತೀರ್ಪು ನೀಡಿ, ಪ್ರಕರಣವನ್ನು ವಜಾಗೊಳಿಸಿತ್ತು. ನಂತರ ಮೋಹನ್ ರಾಂ ಅವರು, ತಮಗಾಗಿದ್ದ ಮಾನಸಿಕ ಹಿಂಸೆ ಮತ್ತು
ಆರ್ಥಿಕ ನಷ್ಟ ಸೇರಿ ರೂ.1.20 ಲಕ್ಷ ಪರಿಹಾರ ಕೋರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 14ನೇ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಎ.ಎಂ. ನಳಿನಿ ಕುಮಾರಿ ಅವರು ಆದೇಶಿಸಿದ್ದಾರೆ.

ದಂಡವನ್ನು ಪರಿಹಾರ ರೂಪದಲ್ಲಿ ಪಾವತಿ ಮಾಡುವುದರ ಜತೆಗೆ ಸುಳ್ಳು ಪ್ರಕರಣದ ಸಂಬಂಧ ದೂರದರ್ಶನ, ಹಾಗೂ ರಾಜ್ಯದ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ದಿನಪತ್ರಿಕೆಯಲ್ಲಿ ಕ್ಷಮೆ ಕೋರಬೇಕು. ತೀರ್ಪು ಬಂದ ಏಳು ದಿನಗಳಲ್ಲಿ ಇವೆಲ್ಲವನ್ನೂ ಮಾಡಬೇಕು ಎಂದೂ ನ್ಯಾಯಾದೀಶರು ಆದೇಶಿಸಿದ್ದಾರೆ. ನಿಗದಿತ ಅವಧಿಯಲ್ಲಿ ಪರಿಹಾರದ ಹಣ ಪಾವತಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಮತ್ತು ಏಳು ದಿನ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಹೇಶ್‌ ಜೋಶಿ ಅವರು ಬೆಂಗಳೂರು ದೂರದರ್ಶನದ
ಮುಖ್ಯಸ್ಥರಾಗಿದ್ದಾಗ, ಅರ್ಜಿದಾರ ಮೋಹನ್ ರಾಂ ಹಾಗೂ ಇತರೆ ಆರು ದೂರದರ್ಶನ ಸಹೋದ್ಯೋಗಿಗಳ ವಿರುದ್ಧ 2004 ರಲ್ಲಿ ಜೆ.ಸಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ನ್ಯಾಯಾಲಯದಲ್ಲಿ ಮೋಹನ್ ರಾಂ ಮತ್ತಿತರ ಆರು ಜನರ ಮೇಲೆ
ಸಂಚು ರೂಪಿಸಿ ನಕಲಿ ದಾಖಲೆಯ ಸೃಷ್ಟಿಸಿ ನಕಲಿ ಸಹಿ ಹಾಕಿದ್ದಾರೆ ಎಂದು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು 2013ರಲ್ಲಿ ಹೈಕೋರ್ಟ್ ಅದೊಂದು ಸುಳ್ಳು ಪ್ರಕರಣ ಎಂದು ರದ್ದು ಮಾಡಿತ್ತು.

ತೀರ್ಪಿನಲ್ಲಿ ಮಹೇಶ ಜೋಶಿ ಅವರು ಸಲ್ಲಿಸಿದ್ದ ದೂರು ದುರುದ್ದೇಶ ಹೊಂದಿರುವುದು ಮಾತ್ರವಲ್ಲ, ತನ್ನ ಸಹೋದ್ಯೋಗಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಹಾಕಿದ ಸುಳ್ಳು ಪ್ರಕರಣ ಎಂದೂ ತೀರ್ಮಾನಿಸಿತ್ತು. ಇದರ ಆಧಾರದ ಮೇಲೆ ಮೋಹನ್ ರಾಂ ಅವರು ಸುಳ್ಳು ಮೊಕದ್ದಮೆ ಹೂಡಿದ್ದ ಮಹೇಶ್ ಜೋಶಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಪರಿಹಾರ ಕೋರಿದ್ದರು. ಸುದೀರ್ಘ ವಿಚಾರಣೆಯ ನಂತರ ಮಹೇಶ್ ಜೋಶಿ ಅವರು ಮೋಹನ್ ರಾಮ್ ಅವರ ಸೇವಾ ನಿವೃತ್ತ ಸೌಲಭ್ಯಗಳನ್ನು ತಡೆಹಿಡಿಯಲು ಮಹೇಶ್ ಜೋಶಿ ಪ್ರಯತ್ನಿಸಿರುವುದು ಸಾಬೀತಾಗಿದೆ ಎಂದೂ ನ್ಯಾಯಾಲಯ ಗುರುತಿಸಿತ್ತು.

More articles

Latest article