ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್ಪಿ) ಗೆದ್ದಿದೆ.
ಬಾಂಗ್ಲಾದೇಶದ ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ 299 ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದಿತ್ತು. ಬಿಎನ್ಪಿ 212 ಸ್ಥಾನಗಳಲ್ಲಿ ಜಯಗಳಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿಗೆ ನಿಧನ ಹೊಂದಿದ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್ ಹೊಸ ಪ್ರಧಾನಿಯಾಗುವುದು ನಿಚ್ಚಳವಾಗಿದೆ.
2024ರ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತ ಪತನಗೊಂಡಿತ್ತು. ನಂತರ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಮಧ್ಯಂತರ ಸರ್ಕಾರದ ಬದಲು ಜನರಿಂದ ನೇರವಾಗಿ ಆಯ್ಕೆಯಾದ ಸರ್ಕಾರದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ವಿದ್ಯಾರ್ಥಿ ದಂಗೆ’ಯ ಬಳಿಕ ಪದಚ್ಯುತಗೊಂಡ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿತ್ತು. ಹೀಗಾಗಿ, ಬಿಎನ್ಪಿ ಮತ್ತು ಅದರ ಹಿಂದಿನ ಮಿತ್ರ ಪಕ್ಷ ಜಮಾತ್-ಇ-ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಜಮಾತ್-ಇ-ಇಸ್ಲಾಮಿ ಕೇವಲ ಸ್ಥಾನಗಳಲ್ಲಿ ಗೆಲ್ಲಲಷ್ಟೇ ಶಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

