ಮಟನ್ ಸಾಂಬಾರ್ ಜೊತೆಗೆ ಮುದ್ದೆ ಮುರೀತಾ ಇದ್ರೆ ಆಹಾ..! ಈ ಥರ ಮಟನ್ ಸಾರು ಮಾಡಿದ್ದೀರಾ..?

Most read

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಟನ್ ಸಾಂಬಾರ್ ಅಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರ್ತಾ ಇದೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೈಲ್ ಇರುತ್ತೆ. ಅದರಲ್ಲೂ ನಾನ್ ವೆಜ್ ನಲ್ಲಿ ವೆರೈಟಿ ವೆರೈಟಿ ಇಷ್ಟ ಪಡುವವರೇ ಹೆಚ್ಚು. ಹಾಗಾದ್ರೆ ಈ ಮಟನ್ ಸಾಂಬಾರ್ ಒಮ್ಮೆ‌ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:

ಒಂದು ಕೆಜಿ ಮೇಕೆ ಮಟನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಪುದೀನಾ
ಮಸಾಲೆ ಪದಾರ್ಥ
ಎಣ್ಣೆ
ಅರಿಶಿನ ಪುಡಿ
ಖಾರದ ಪುಡಿ
ಗರಂ ಮಸಾಲ ಇತ್ಯಾದಿ.. ಇತ್ಯಾದಿ

ಮಾಡುವ ವಿಧಾನ

ಒಂದು ಕೆಜಿ ಮೇಕೆ ಮಟನ್ ಗೆ ಮೊದಲು ಮಸಾಲೆ ತಯಾರಿಸಿಕೊಳ್ಳಿ. ಮೊದಲಿಗೆ ಮಸಾಲೆ ರೆಡಿ ಮಾಡಿಕೊಳ್ಳಬೇಕು. ಮೂರು ಈರುಳ್ಳಿ, ಒಂದು ಗಡ್ಡೆ ಬೆಳ್ಳುಳ್ಳಿ, ಒಂದೂವರೆ ಇಂಚು ಶುಂಠಿಯನ್ನು ಎಣ್ಣೆಗೆ ಹಾಕಿ ಪ್ರೈ ಮಾಡಿಕೊಳ್ಳಿ. ಒಂದು ಸಣ್ಣ ಟಮೋಟೋ ಹಾಕಿ ಎರಡು ನಿಮಿಷ ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ. ಅದೇ ಕುಕ್ಕರ್ ಗೆ ಇನ್ನು ಸ್ವಲ್ಪ ಎಣ್ಣೆ ಹಾಕಿ, ಮಟನ್ ಹಾಕಿ ತಿರುವಿ. ಕಾಲು ಟೀ ಸ್ಪೂನ್ ಅರಿಶಿನ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ.

ಅಷ್ಟರಲ್ಲಿ ಹುರಿದಿಟ್ಟಿದ್ದ ಮಸಾಲೆ, ಅರ್ಧ ಕಟ್ಟು ಪುದೀನಾ, ಕೊತ್ತಂಬರಿ ಸೊಪ್ಪು, ಅರ್ಧ ಕಪ್ ತೆಂಗಿನಕಾಯಿ ತುರಿ, ಮರಾಠಿ ಮಗ್ಗು, ಏಲಕ್ಕಿ, ಗಸಗಸೆ, ನಕ್ಷತ್ರದ ಹೂ, ಹುರಿಗಡಲೆ, ಸೋಂಪು ಕಾಳು, ಚಕ್ಕೆ, ಲವಂಗ, ಮೂರು ಟೇಬಲ್ ಸ್ಪೂನ್ ಧನ್ಯಪುಡಿ, ಒಂದೂವರೆ ಟೇಬಲ್ ಸ್ಪೂನ್ ಖಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಮಟನ್ ಫ್ರೈ ಆದ ಮೇಲೆ ರುಬ್ಬಿರುವ ಮಸಾಲೆ ಹಾಕಿ ಮಿಕ್ಸ್ ಮಾಡಿ. ಒಂದು ಕುದಿ ಬರಲಿ. ಮಿಕ್ಸಿ‌ ಜಾರಿನಲ್ಲಿರುವ ನೀರನ್ನು ಹಾಕಿ ಮಿಕ್ಸ್ ಮಾಡಿ. ನಿಮ್ಮ ರುಚಿಗೆ ಅಥವಾ ಸಾಂಬಾರ್ ಎಷ್ಟು ಬೇಕೋ ಅಷ್ಟನ್ನು ಮಾಡಿಕೊಳ್ಳಿ.

More articles

Latest article