ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಕ್ವೀನ್ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ ಎಂಥಹದ್ದೇ ಪಾತ್ರವಾದರು ನೀರು ಕುಡಿದಷ್ಟೇ ಸಲೀಸಾಗಿ ಮಾಡುವ ಆತ್ಮವಿಶ್ವಾಸ ಇರುವ ನಟಿ. ಅದಕ್ಕೆ ಬೇರೆ ನಟಿಯರಿಗೂ ಸವಾಲು ಹಾಕಿದ್ದರು. ನಟನೆಯಲ್ಲಿ ನನ್ನನ್ನು ಮೀರಿಸುವವರು ಯಾರಿಲ್ಲ ಅಂತ. ಮೋದಿ ಹಾಗೂ ಬಿಜೆಪಿ ಪರವಹಿಸಿ ಕಡೆಗೂ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ಲೋಕಸಭಾ ಚುನಾವಣೆಯಿಂದ ತನ್ನ ರಾಜಕೀಯ ಜೀವನವನ್ನು ಶುರು ಮಾಡಿದ್ದಾರೆ. ಹಿಮಾಚಲದ ಮಂಡಿಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಈಗಾಗಲೇ ಸಾಕಷ್ಡು ಪ್ರಚಾರ ಕಾರ್ಯ ನಡೆಸಿ, ನೆನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮಂಡಿಯಲ್ಲಿ ನೆನ್ನೆ ನಾಮಪತ್ರ ಸಲ್ಲಿಕೆ ಮಾಡಿರುವ ಕಂಗನಾ, ತಮ್ಮ ಹೆಸರಿನ ಒಟ್ಟಾರೆ ಆಸ್ತಿಪಾಸ್ತಿಯ ವಿವರವನ್ನು ನೀಡಿದ್ದಾರೆ. ಅದರ ಜೊತೆಗೆ ತಾನು ಓದಿರುವ ಮಾಹಿತಿಯನ್ನು ಅಫಿಡೆವಿಟ್ ನಲ್ಲಿ ಮೆನ್ಶನ್ ಮಾಡಿದ್ದಾರೆ. ಅವರೇ ಹೇಳಿರುವಂತೆ ಕಂಗನಾ 91 ಕೋಟಿ ಆಸ್ತಿಯ ಒಡತಿ. ಅದರಲ್ಲಿ 63 ಕೋಟಿ ಚಿರಾಸ್ತಿಗಳು ಇದೆ. ಇನ್ನು ನಟಿ ಕಂಗನಾ ಕೋಟ್ಯಾಂತರ ರೂಪಾಯಿ ಸಾಲ ಬೇರೆ ಮಾಡಿದ್ದಾರೆ. 17.38 ಕೋಟಿ ಸಾಲ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.
ಕಂಗನಾ ನೇರ ಮಾತುಗಳನ್ನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಿಜೆಪಿ ಬಗ್ಗೆ ಸಾಕಷ್ಟು ಮಾತನಾಡುವ ನಟಿ ಓದಿರುವುದು ಏನು ಎಂಬ ಕುತೂಹಲ ಎಲ್ಲರಿಗೂ ಇತ್ತು. ಇದೀಗ ತಮ್ಮ ಅಫಿಡೆವಿಟ್ ನಲ್ಲಿ ಆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಕಂಗನಾ ಓದಿರುವುದು ಕೇವಲ ಪಿಯುಸಿ ಮಾತ್ರ. ಆದರೆ ಕೋಟಿ ಕೋಟಿ ಒಡತಿಯಾಗಿದ್ದಾರೆ. ಮಂಡಿಯಲ್ಲಿ ಕಾಂಗ್ರೆಸ್ ನ ವಿಕ್ರಮಾದಿತ್ಯ ಸಿಂಗ್ ಎದುರು ಸ್ಪರ್ಧೆಗೆ ನಿಂತಿದ್ದಾರೆ.