ವಿದ್ಯುತ್‌ ಸ್ಪರ್ಶ ಘಟನೆ : ಮೃತ ಅಭಿಮಾನಿಗಳ ಮನೆಗೆ ಯಶ್ ಭೇಟಿ, ಸಾಂತ್ವನ!

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಯಶ್ ಅಭಿಮಾನಿಗಳು ಫ್ಲೆಕ್ಸ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕುಟುಂಬವನ್ನು ನಟ ಯಶ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಇಂದು ಸಂಜೆ ಹುಬ್ಬಳ್ಳಿಗೆ ಬಂದಿಳಿದ ರಾಕಿಂಗ್ ಸ್ಟಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಸೀದಾ ಮೃತರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.

ಮೊದಲು ಮೃತ ಮುರಳಿ ಮನೆಗೆ ತೆರಳಿ, ಅವರ ತಂದೆಗೆ ಧೈರ್ಯ ಹೇಳಿ, ಮೃತ ನವೀನ್‌ ಗಾಜಿ ಮತ್ತು ಹನುಮಂತ ಹರಿಜನ್‌ ಮನೆಗೂ ಭೇಟಿ ನೀಡಿ ಯಶ್‌ ಸಾಂತ್ವನ ಹೇಳಿದ್ದಾರೆ.

ಗದಗ ಜಿಲ್ಲೆಯ ಸೂರಣಗಿ ಗ್ರಾಮದ ಮುರಳಿ ನಡವಿನಮನಿ (20), ಹನುಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ನಟ ಸ್ಟಾರ್ ಯಶ್ ಹುಟ್ಟು ಹಬ್ಬ ಪ್ರಯುಕ್ತ ಊರಿನ ಬೀದಿಯಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು. ಇನ್ನುಳಿದ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

More articles

Latest article

Most read