ಸಾಹಿತಿಗಳಿಗೆ ಉದ್ದಟತನ, ಸಿನಿಕತನ ಇರಬಾರದು: ಬರಗೂರು ರಾಮಚಂದ್ರಪ್ಪ

Most read

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿ ತಪ್ಪುತ್ತದೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆʼ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ  ಮತ್ತು ವಿಮರ್ಶೆಗಳ ಮಂಡನೆಯಿಂದ  ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ ಎಂದು ಹೇಳಿದರು. ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳ ಅಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳ ಅಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಮೊಳಕೆ ಕೃತಿ ಯಾವುದೆ ವೈಚಾರಿಕ ಪಂಥಕ್ಕೆ ಸೇರದೆ ಉತ್ತಮವಾದದನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಆ ನಿಟ್ಟಿನಲ್ಲಿ ಜನಪರತೆಯ ಹಾದಿಯಲ್ಲಿ ಈ ಕೃತಿ ಗೆಲ್ಲುತ್ತದೆ. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಪರಿಚಯಿಸಿರುವ ಲೇಖಕರು ಉತ್ತಮ ವಿಮರ್ಶೆಯೊಂದನ್ನು ಮಂಡಿಸಿದ್ದಾರೆ. ಹಾಗೆಯೇ ಗದ್ದರ್ ಕುರಿತಂತೆ ಅವರ ಹೋರಾಟ ಮತ್ತು ಕೊನೆಗಾಲ ಕುರಿತು ಅವರ ಜೀವಂತಿಕೆಯನ್ನು ಪಸ್ತಾಪ ಮಾಡಿದ್ದಾರೆ, ವ್ಯಕ್ತಿಚಿತ್ರಗಳಲ್ಲಿ ಉತ್ತಮವಾದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಂಜುನಾಥ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭಕ್ತಿ ಇರಬೇಕು ನಿಜ. ಆದರೆ ಪಂಥಗಳನ್ನು ಸ್ಥಾಪಿಸಿ ಧರ್ಮವನ್ನು ಭಕ್ತಿಯ ಹೆಸರಿನಲ್ಲಿ ಪಸರಿಸಲಾಗುತ್ತಿದೆ. ಮೂಡನಂಬಿಕೆ ಹಾಗೂ ಕಂದಾಚಾರಗಳನ್ನು ಸೃಷ್ಟಿಸಿ ಸಮಾಜವನ್ನು ಹೇಗೆ ಶೋಷಣೆ ಮಾಡಲಾಗುತ್ತಿದೆ ಎನ್ನವುದನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಲೇಖಕರು ಭಕ್ತಿಯ ಮೂಲ ಆಶಯವನ್ನು ತಿಳಿಸುವ ಪ್ರಯತ್ನ ಮಾಡಿರುವುದು ವೈಚಾರಿಕೆ ನೆಲಗಟ್ಟಿನ ಹಿನ್ನಲೆಯಲ್ಲಿ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ ಪತ್ರಿಕೋದ್ಯಮದಲ್ಲಿ ಇಂದು ಸತ್ಯ ಅಸತ್ಯವಾಗಿ ಹೋಗಿದೆ. ಸತ್ಯದ ಹೆಸರಿನಲ್ಲಿ ಸುಳ್ಳುಗಳನ್ನು ರಾರಾಜಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಮತ್ತೊಬ್ಬ ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ  ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಪತ್ರಕರ್ತರಾದವರ ಸ್ಥಿತಿ ಇಂದು ಶೋಚನಿಯವಾಗಿದೆ.  ಸುದ್ದಿಮನೆಯ ಮಾಲೀಕ ಹೇಳಿದ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುವುದರಿಂದ ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳುಗಳು ಸೃಷ್ಟಿಯಾಗುತ್ತಿವೆ. ಇದರಿಂದ ಇಂದು ಮಾದ್ಯಮಗಳ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.

ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪತ್ರಿಕೋದ್ಯಮದ ಸ್ಥಿತಿ ಶೋಚನೀಯ ವಾಗಿದೆ ಸೋಶಿಯಲ್ ಮೀಡಿಯಾ ಹಾವಳಿಯಿಂದ ಯಾರು ಪತ್ರಕರ್ತರು ಯಾರು ಅಲ್ಲ ಎನ್ನುವುದನ್ನು ಗುರುತಿಸಲು ಆಗದಂತಹ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪತ್ರಿಕೆಗಳು ಒಂದು ಕಾಲದಲ್ಲಿ ಜಾಹೀರಾತು ಇಲ್ಲದೆ ಪ್ರಕಟವಾಗುತ್ತಿದ್ದವು ಆದರೆ ಈಗ ಜಾಹೀರಾತು ಇಲ್ಲದೆ ಪತ್ರಿಕೆಗಳು ನಡೆಯುವುದು ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ, ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ಮತ್ತು ಹನುಮೇಶ್‌ ಯಾವಗಲ್‌  ಉಪಸ್ಥಿತರಿದ್ದರು.

More articles

Latest article