Tuesday, September 17, 2024

ಅಬ್ಬಬ್ಬಾ ಈ ಬೋಟಿ ಸಾರು ಇಷ್ಟೊಂದು ಸುಲಭವಾ..?

Most read

ನಾನ್ ವೆಜ್ ನಲ್ಲಿ ತರಹೇವಾರಿ ತಿನಿಸುಗಳಿರುತ್ತವೆ. ಮಾಡುವುದನ್ನು ಕಲಿತರೆ ಮುಗಿತು. ಇಂಗು ತೆಂಗು ಇದ್ದರೆ ಮಂಗನು ಅಡುಗೆ ಮಾಡುತ್ತೆ ಎಂಬ ಗಾದೆ ಮಾತಿದೆ. ಅದರಂತೆ ಬೇಕಾಗುವ ಪದಾರ್ಥಗಳು, ಮಾಡುವ ವಿಧಾನ ಗೊತ್ತಿದ್ದರೆ ಎಲ್ಲರೂ ಮಾಡಬಹುದು. ಹಾಗಾದ್ರೆ ಬೋಟಿ ಸಾರು ಮಾಡೋದು ಹೇಗೆ ಎಂಬ ವಿಧಾನ ಇಲ್ಲಿದೆ. ನೀವೊಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥ:

ವೆರೈಟಿ ಬೋಟಿ
ಈರುಳ್ಳಿ
ಕೊತ್ತಂಬರಿ
ಪುದೀನಾ
ಕಾಯಿ
ತುಪ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಉಪ್ಪು
ಧನ್ಯ ಪುಡಿ
ಖಾರದ ಪುಡಿ
ಅರಿಶಿನದ ಪುಡಿ

ಬೋಟಿ ಸಾರು ಮಾಡುವ ವಿಧಾನ: ಬೋಟಿಯಲ್ಲಿ ವೆರೈಟಿ ಸಿಗುತ್ತದೆ. ನೀವೂ ಮಿಕ್ಸ್ ತರಬಹುದು. ತಂದ ಬೋಟಿಯನ್ನು ಮೊದಲಿಗೆ ಬಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸುವುದರಿಂದ ಅದರ ವಾಸನೆ ಹೋಗುತ್ತದೆ. ಹತ್ತರಿಂದ ಹದಿನೈದು ನಿಮಿಷ ಬೇಯಿಸಿ, ಆಮೇಲೆ ಸ್ವಲ್ಪ ತಣ್ಣನೆ ನೀರಿನಿಂದ ತೊಳೆಯಿರಿ. ಸುಲಭವಾಗಿ ಅದರ ಮೇಲಿನ ಗಲೀಜು ಹೋಗಿ ಬಿಡುತ್ತದೆ. ಅದನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಕಟ್ ಮಾಡಿದ ಬೋಟಿಯನ್ನೆಲ್ಲಾ ಕುಕ್ಕರ್ ಹಾಕಿ ಕೂಗಿಸಿಕೊಳ್ಳಿ. ಇದು ಕೂಗುವ ಮುನ್ನ ಮಸಾಲೆ ರೆಡಿ ಮಾಡಿಕೊಳ್ಳಿ.

ಒಂದು ಬೌಲ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಅರ್ಧ ಸ್ಪೂನ್ ಚಕ್ಕೆಲವಂಗ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಎಲ್ಲಾ ಸೇರಿಸಿ ರುಬ್ಬಿಕೊಳ್ಳಿ. ಬೋಟಿಯನ್ನು ಮೂರು ವಿಷಲ್ ಆದ ಮೇಲೆ ಆಫ್ ಮಾಡಿ.

ಮತ್ತೊಂದು ಬಾಂಡಲಿಗೆ ಎಣ್ಣೆ, ಸ್ವಲ್ಪ ಈರುಳ್ಳಿ, ಸ್ವಲ್ಪ ರುಬ್ಬಿದ ಮಸಾಲೆಯನ್ನು ಹಾಕಿ ಪ್ರೈ ಮಾಡಿ. ಅದಕ್ಕೆ ಬೋಟಿಯನ್ನು ಸೇರಿಸಿ. ಅದಕ್ಕೆ ಸ್ವಲ್ಪ ಖಾರದ ಪುಡಿ, ಧನ್ಯಾ ಪುಡಿ, ಸ್ವಲ್ಪ ಪೆಪ್ಪರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಕೊತ್ತಂಬರಿ ಸೊಪ್ಪು, ಸ್ವಲ್ಪ ತುಪ್ಪ ಹಾಕಿ, ಸ್ವಲ್ಪ ಕಾಯಿ ಹಾಕಿ ಕುದಿಸಿ. ಆಮೇಲೆ ಸವಿಯಲು ಸಿದ್ಧ.

More articles

Latest article