ಬೆಂಗಳೂರು: ಆಟೊ ಚಾಲಕನೊಬ್ಬ ಬುಕ್ ಮಾಡಿದ್ದ ಸ್ಥಳಕ್ಕೆ ಬದಲಾಗಿ ತಪ್ಪಾದ ಜಾಗಕ್ಕೆ ಕರೆದೊಯ್ಯಲು ಯತ್ನಿಸಿದ್ದರಿಂದ ಭಯಗೊಂಡ ಮಹಿಳೆ ಚಲಿಸುತ್ತಿದ್ದ ಆಟೊದಿಂದ ಜಿಗಿದು ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಾಳ ಸಮೀಪದ ವೀರಣ್ಣಪಾಳ್ಯ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಕೆಎ 03 ಎಎಂ 89566 ನೋಂದಣಿಯ ಆಟೊ ಚಾಲಕ ಈ ಕೃತ್ಯ ಎಸಗಿದ್ದಾನೆ ಎಂದು ಮಹಿಳೆಯ ಪತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮಹಿಳೆ ಹೊರಮಾವುನಿಂದ ಥಣಿಸಂದ್ರಕ್ಕೆ ತೆರಳಲು ‘ನಮ್ಮ ಯಾತ್ರಿ’ ಆ್ಯಪ್‌ನಲ್ಲಿ ಈ ಮಹಿಳೆ ಆಟೋ ಬುಕ್ ಮಾಡಿದ್ದರು. ಆದರೆ ಚಾಲಕ ಬೇರೆಯದ್ದೇ ಸ್ಥಳಕ್ಕೆಆಟೋ ತಿರುಗಿಸಿದ್ದ. ಆಟೊ ನಿಲ್ಲಿಸುವಂತೆ ಮಹಿಳೆ ಕೂಗಾಡಿದರೂ ಚಾಲಕ ನಿಲ್ಲಿಸಿರಲಿಲ್ಲ. ಚಾಲಕನ ವರ್ತನೆಯಿಂದ ಭಯಗೊಂಡ ಮಹಿಳೆ ಚಲಿಸುತ್ತಿದ್ದಆಟೊದಿಂದ ಜಿಗಿದು ಪಾರಾಗಿ ಮನೆ ತಲುಪಿದ್ದಾರೆ.