ಮೀರತ್: ಮರ್ಚಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿರುವ ಪ್ರಕರಣ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೌರಭ್ ರಜಪೂತ್ (29) ಎಂದು ಗುರುತಿಸಲಾಗಿದೆ. ಮೀರತ್‌ನ ಇಂದಿರಾ ನಗರದಲ್ಲಿ ಈ ದುರಂತ ನಡೆದಿದೆ.
ಕೊಲೆ ಆರೋಪದ ಮೇಲೆ ಸೌರಭ್‌ನ ಹೆಂಡತಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಸೌರಭ್ ಹಾಗೂ ಮುಸ್ಕಾನ್ ಅವರು 2016 ರಲ್ಲಿ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ.ಇತ್ತೀಚೆಗೆ ಸೌರಭ್ ಹಾಗೂ ಮುಸ್ಕಾನ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಸೌರಭ್ ನನ್ನು ಹತ್ಯೆ ಮಾಡಲೇಬೇಕು ಎಂದು ತೀರ್ಮಾನ ಮಾಡಿದ್ದ ಮುಸ್ಕಾನ್, ತನ್ನ ಪ್ರಿಯಕರ ಸಾಹಿಲ್ ಜೊತೆ ಸಂಚು ರೂಪಿಸಿದ್ದಾಳೆ. ಸೌರಭ್‌ನನ್ನು ಮನೆಗೆ ಕರೆಸಿಕೋಂಡು ಮಾರ್ಚ್ 4 ರಂದು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ಕತ್ತರಿಸಿ ನೀರಿನ ಡ್ರಮ್‌ಗಳಲ್ಲಿ ತುಂಬಿ ಅದಕ್ಕೆ ಸಿಮೆಂಟ್ ತುಂಬಿದ್ದರು. ಮುಸ್ಕಾನ್ ಪೊಲೀಸರ ದಾರಿ ತಪ್ಪಿಸಲು ಸೌರಭ್ ಮೊಬೈಲ್‌ನಿಂದ ಸಂದೇಶಗಳನ್ನು ಕಳಿಸುತ್ತಿದ್ದಳು ಎಂದು ಪೊಲೀಸರು ಹೇ