ತೆಲುಗು ನಟ ಪ್ರಭಾಸ್ ಈಗ 40 ವರ್ಷ ದಾಟಿದ್ದಾರೆ. ಆದರೆ ಇನ್ನು ಕೂಡ ಮದುವೆಯಾಗಿಲ್ಲ. ಆಗಾಗ ಪ್ರಭಾಸ್ ಮದುವೆ ವಿಚಾರ ಸುದ್ದಿಯಾಗುತ್ತಲೆ ಇರುತ್ತದೆ. ಪ್ರಭಾಸ್ ಹೋದಲ್ಲಿ ಬಂದಲ್ಲಿ ಈ ಪ್ರಶ್ನೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬರೀ ಪ್ರಭಾಸ್ ಗೆ ಮಾತ್ರವಲ್ಲ, ಅವರ ಫ್ಯಾಮಿಲಿ ಸಿಕ್ಕಾಗಲೂ ಈ ಪ್ರಶ್ನೆಯನ್ನು ಕೇಳುತ್ತಾರೆ. ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕಲ್ಕಿ ಇನ್ನೇನು ರಿಲೀಸ್ ಆಗಬೇಕಿದೆ. ಇದರ ನಡುವೆ ಮತ್ತೊಮ್ಮೆ ಮದುವೆ ವಿಚಾರ ಬಂದಿದ್ದು, ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರತಿಕ್ರಿಯೆ ನೀಡಿದ್ದಾರೆ.
ಕಲ್ಕಿ ಸಿನಿಮಾದ ಪ್ರಚಾರದ ವೇಳೆ ಬುಜ್ಜಿ ಪರಿಚಯ ಮಾಡಿಕೊಡಲು ಪ್ರಭಾಸ್ ಒಂದು ಪೋಸ್ಟ್ ಹಾಕಿದ್ದರು. ನನ್ನ ಜೀವನಕ್ಕೆ ಹೊಸ ವ್ಯಕ್ತಿಯ ಪರಿಚಯ ಎಂದು ಅದರಲ್ಲಿ ಇತ್ತು. ಇದನ್ನು ಕಂಡು ಓ ಪ್ರಭಾಸ್ ಜೀವನಕ್ಕೆ ಹುಡುಗಿ ಎಂಟ್ರಿಯಾಗುತ್ತಿರಬಹುದು ಎಂದೇ ಸುದ್ದಿ ಹಬ್ಬಿತ್ತು. ಆ ಬಗ್ಗೆ ಮಾತನಾಡಿರುವ ಶ್ಯಾಮಲಾ ದೇವಿ, ಕಲ್ಕಿ ಸಿನಿಮಾದ ಬಗ್ಗೆ ಪ್ರಭಾಸ್ ಮಾಡಿದ್ದ ಪೋಸ್ಟ್ ಬಗ್ಗೆ ನನಗು ಸಾಕಷ್ಟು ಜನ ಫೋನ್ ಮಾಡಿದ್ದರು. ಇಲ್ಲ ಸ್ವಲ್ಪ ಕಾಯಿರಿ, ಅದೇನು ಅಂತ ಗೊತ್ತಾಗುತ್ತೆ ಎಂದಿದ್ದೆ. ಮದುವೆ ವಿಚಾರದ ಬಗ್ಗೆ ಈ ರೀತಿಯೆಲ್ಲಾ ಪೋಸ್ಟ್ ಮಾಡಿ ಹೇಳುವವನಲ್ಲ. ಏನೇನೋ ಅಂದುಕೊಳ್ಳಬೇಡಿ ಎಂದಿದ್ದೆ.
ಆತನ ಗಮನವೆಲ್ಲಾ ಸಿನಿಮಾ ಮೇಲಿದೆ. ಹೀಗಾಗಿ ಮದುವೆ ಬಗ್ಗೆ ಗಮನ ಬಂದಿಲ್ಲ. ಆ ಆಲೋಚನೆ ಬಂದಾಗ ಆಗುತ್ತಾನೆ. ಹೆಣ್ಣು ಮಕ್ಕಳ ಬಗ್ಗೆ, ಮದುವೆ ಬಗ್ಗೆ ಬಹಳ ಗೌರವ ಇದೆ. ಆದರೆ ಆತ ಮದುವೆ ಯಾವಾಗ ಆಗುತ್ತಾನೆ ಎನ್ನುವುದು ದೇವರಿಗೆ ಗೊತ್ತು. ಪ್ರಭಾಸ್ – ಅನುಷ್ಕಾ ಮದುವೆ ವಿಚಾರ ವದಂತಿ. ಯಾರನ್ನೂ ಬೇಕಾದರೂ ಮದುವೆ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ.