ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಮೇಲೆ ಹೆವಿ ಎಕ್ಸ್ ಪೆಕ್ಟೇಷನ್ಸ್ ಇದೆ. ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಸಿನಿಮಾ ಆಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಯಾಕಂದ್ರೆ ಮಾರ್ಟಿನ್ ಸಿನಿಮಾ ಕಡಿಮೆ ಅವಧಿಯಲ್ಲೇನೂ ಶೂಟಿಂಗ್ ಆಗಿಲ್ಲ. ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ಮಾಡಿದ ಏಕೈಕ ಸಿನಿಮಾ. ಮಾರ್ಟಿನ್ ಸಿನಿಮಾ ಇಷ್ಟೊಂದು ತಡವಾಗಿ ರಿಲೀಸ್ ಮಾಡುವುದು ಬೇಕಿತ್ತಾ ಎಂಬ ಮಾತುಗಳು ಕೇಳಿ ಬಂದಿದೆ. ಅದಕ್ಕೆಲ್ಲಾ ನಿರ್ದೇಶಕ ಎ.ಪಿ.ಅರ್ಜುನ್ ಅವರೇ ಉತ್ತರ ಕೂಡ ನೀಡಿದ್ದಾರೆ. ತಾವೂ ಮಾಡುವ ಸಿನಿಮಾಗಳು ಯಾಕೆ ತಡವಾಗುತ್ತವೆ ಎಂಬುದನ್ನು ಹೇಳಿದ್ದಾರೆ.
ಮಾರ್ಟಿನ್ ಬಗ್ಗೆ ಮಾತನಾಡಿ, ಮಾರ್ಟಿನ್ ಸಿನಿಮಾವನ್ನು ಬೇಕು ಅಂತ ತಡ ಮಾಡಿಲ್ಲ. ಯಾವುದನ್ನು ರಿಶೂಟ್ ಕೂಡ ಮಾಡಿಲ್ಲ. 250 ದಿನಗಳ ಶೂಟ್ ಆಗಿದೆ. ಹಾಗಂತ ಯಾವುದು ಬೇಕು ಬೇಕು ಎಂದು ಮಾಡಿಲ್ಲ. ಸಿನಿಮಾದಲ್ಲಿ ವಾವ್ ಫ್ಯಾಕ್ಟರ್ ಇರುವ ಕಾರಣ ಇಷ್ಟು ತಡವಾಗಿದೆ ಎಂದಿದ್ದಾರೆ.
ಅಂಬಾರಿ ಸಿನಿಮಾ ಮಾಡುವಾಗ 83 ದಿನದಲ್ಲಿ ಮುಗಿದಿದೆ. ಆ ಸಮಯದಲ್ಲಿ ದುಡ್ಡಿನ ಸಮಸ್ಯೆ ಎಲ್ಲಾ ಏನು ಆಗಿಲ್ಲ. ಎಲ್ಲವೂ ಸಲೀಸಾಗಿತ್ತು. ಆದರೆ ಅದ್ದೂರಿ ಸಿನಿಮಾಗೆ ಹಣದ ಸಮಸ್ಯೆ ಆಗಿತ್ತು. ಮೂರು ಲಕ್ಷ ಸಿಕ್ಕರೆ ಒಂದಷ್ಟು ಶೂಟಿಂಗ್ ಪ್ಲ್ಯಾನ್ ಮಾಡುತ್ತಿದ್ದೆವು, 60 ಸಾವಿರ ಸಿಕ್ಕರೆ ಇನ್ನಷ್ಟು ಶೂಟಿಂಗ್ ಮಾಡುತ್ತಿದ್ದೆವು. ರಾಟೆ ಸಿನಿಮಾಗೆ ನಿರ್ಮಾಪಕರು ಕೈಯೆತ್ತಿ ಬಿಟ್ರು. ಕಡೆಗೆ ನಾನೇ ನಿರ್ಮಾಣ ಕೂಡ ಮಾಡಿದೆ. ಕಿಸ್ ಸಿನಿಮಾ ಸಮಯದಲ್ಲಿ ದುಡ್ಡಿನ ಸಮಸ್ಯೆ ಆಗಿತ್ತು. ಆದರೂ ರಿಲೀಸ್ ಮಾಡಿದೆವು. ಆದರೆ ಮಾರ್ಟಿನ್ ಸಿನಿಮಾಗೆ ಯಾವುದೇ ರೀತಿಯ ದುಡ್ಡಿನ ಸಮಸ್ಯೆ ಆಗಿಲ್ಲ. ಆದರೆ ದೊಡ್ಡಮಟ್ಟದಲ್ಲಿ ಮೂಡಿ ಬಂದಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಮಾಡುತ್ತೇವೆ ಎಂದಿದ್ದಾರೆ.